ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬೆಂಗಳೂರಿನ ನಾಗವಾರ ಮನೆಯಲ್ಲಿ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸೀಕ್ರೇಟ್ ಮೀಟಿಂಗ್ ನಡೆದಿದೆ.
ಒಂದೂವರೆ ಗಂಟೆಯ ಸೀಕ್ರೇಟ್ ಮೀಟಿಂಗ್ ನಲ್ಲಿ ಕನ್ನಡ ನಿಮಾಗಳಿಗೆ ಥೀಯೇಟರ್ ಕೊರತೆ, ಟಿಕೆಟ್ ಬೆಲೆ ವಿಚಾರ, ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ಪ್ರೊಡ್ಯೂಸರ್ಗಳ, ವಿತರಕರು, ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ.
ಸಭೆಯಲ್ಲಿ ಗಣೇಶ್, ದುನಿಯಾ ವಿಜಯ್, ಧ್ರುವಾ ಸರ್ಜಾ ಸೇರಿದಂತೆ ಹಲವು ನಟರು, ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾಹಿತಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಥಿಯೇಟರ್ ಸಮಸ್ಯೆ ದೂರ ಮಾಡಲು ಸಭೆ ಇತ್ತು. ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು, ವರ್ಷಕ್ಕೆ ಎರಡು ಸಿನಿಮಾಗಳು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸ್ಟಾರ್ ಸಿನಿಮಾಗಳಿಂದ ಥಿಯೇಟರ್ಗಳು ಉಳಿಯುತ್ತವೆ. ಹೀಗಾಗಿ ಸ್ಟಾರ್ಗಳು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು. ಥಿಯೇಟರ್ಗಳಿಗೆ ಜನ ಬರುತ್ತಿಲ್ಲ. ಇದು ದೊಡ್ಡ ಸಮಸ್ಯೆ ಆಗಿದೆ ಎಂದರು.
ಥಿಯೇಟರ್ ಮುಚ್ಚುತ್ತಿರೋ ಕುರಿತು ಚರ್ಚೆ ಮಾಡಲಾಗಿದೆ. ಥಿಯೇಟರ್ಗಳಿಗೆ ಲ್ಯಾಂಡ್ ಟ್ಯಾಕ್ಸ್, ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತೆ ಸಿಎಂ ಬಳಿ ಬೇಡಿಕೆ ಇಡಲಾಗುವುದು ಎಂದು ತಿಳಿಸಿದರು.
—

Be the first to comment