ಸೆಪ್ಟೆಂಬರ್ 23ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಇದೇ ಸೆಪ್ಟೆಂಬರ್ 23ಕ್ಕೆ ನಡೆಯಲಿದ್ದು, ಅಧ್ಯಕ್ಷ ಪಟ್ಟಕ್ಕಾಗಿ  ಫೈಟ್ ಏರ್ಪಟ್ಟಿದೆ. ಎಕ್ಸ್​ಕ್ಯೂಸ್​ಮೀ ಖ್ಯಾತಿಯ ನಿರ್ಮಾಪಕ ಎನ್.ಎಂ ಸುರೇಶ್ ಕಣಕ್ಕೆ ಧುಮುಕಿದ್ದಾರೆ.

ಈ ಬಾರಿ ಹೆಚ್ಚಿನ ಹಿರಿಯ ನಿರ್ಮಾಪಕರು ನಿರ್ಮಾಪಕ ಎನ್.ಎಂ ಸುರೇಶ್ ರನ್ನ ಬೆಂಬಲಿಸ್ತಾ ಇದ್ದಾರೆ. ಎಕ್ಸ್​​ಕ್ಯೂಸ್ ಮೀ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುರೇಶ್ ಚಪ್ಪಾಳೆ, ಕಾರಂಜಿ, ಚೆಲುವೆಯೇ ನಿನ್ನ ನೋಡಲು ಸೇರಿದಂತೆ ಅನೇಕ ಸದಭಿರುಚಿಯ ಸಿನಿಮಾಗಳನ್ನ ನಿರ್ಮಿಸಿದವರು.  ಫಿಲಂ ಫೆಡರೇಷನ್ ಉಪಾಧ್ಯಕ್ಷರೂ ಆಗಿರೋ,ಸುರೇಶ್ ಅನೇಕ ವರ್ಷಗಳಿಂದ ವಾಣಿಜ್ಯ ಮಂಡಳಿಯಲ್ಲಿ ನಾನಾ ಜವಾಬ್ದಾರಿಗಳನ್ನ ನಿರ್ವಹಿಸಿದ್ದಾರೆ. ಫಿಲಂ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸುರೇಶ್ ಚಿತ್ರೋದ್ಯಮದ ಸೇವೆ ಮಾಡುವ ಉತ್ಸಾಹದಲ್ಲಿದ್ದಾರೆ.

ಎನ್.ಎಂ ಸುರೇಶ್ ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಂತ ನಿರ್ಧರಿಸಿ ಹಿರಿಯ ನಿರ್ಮಾಪಕ ಸಾ ರಾ ಗೋವಿಂದು, ಸುರೇಶ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸೆಪ್ಟೆಂಬರ್ 23ಕ್ಕೆ ಫಿಲಂ ಚೇಂಬರ್ ಚುನಾವಣೆ ನಡೆಯಲಿದ್ದು, ಸೂಕ್ತ ಅಧ್ಯಕ್ಷರನ್ನ ಆಯ್ಕೆ ಮಾಡೋದಕ್ಕೆ ಕನ್ನಡ ಚಿತ್ರೋದ್ಯಮ ಸಿದ್ದವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಮಹತ್ವ ಕಳೆದುಕೊಂಡಿದೆ. ಅದಕ್ಕೆ ಚಿತ್ರೋದ್ಯಮದ ಮೇಲೆ ಹಿಡಿತವೇ ಇಲ್ಲ. ಚಿತ್ರರಂಗದ ಒಡೆದ ಗೂಡಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿಯ ಫಿಲಂ ಚೇಂಬರ್ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡುವಂತೆ ಸಮರ್ಥರು ಆಯ್ಕೆ ಆಗಬೇಕು ಎಂಬ ನಿರೀಕ್ಷೆಯನ್ನೂ ಚಿತ್ರರಂಗದ ಹಿರಿಯರು ಇಟ್ಟುಕೊಂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!