ನಟಿ ರಮ್ಯಾ ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ 5 ರಂದು ವಿಜಯದಶಮಿಯ ದಿನ ಚಿತ್ರದ ಘೋಷಣೆಯಾಗಲಿದೆ.
ಈ ಬಗ್ಗೆ ರಮ್ಯಾ ಮಾಹಿತಿ ನೀಡಿದ್ದಾರೆ. ಈ ಸಿನಿಮಾದ ಡೈರೆಕ್ಟರ್ ಸ್ಯಾಂಡಲ್ ವುಡ್ ನ ಪ್ರತಿಭಾವಂತ ಶೆಟ್ಟಿಗಳಲ್ಲಿ ಒಬ್ಬರು ಎಂದು ರಮ್ಯಾ ಈ ಹಿಂದೆಯೇ ಸುಳಿವು ನೀಡಿದ್ದರು.
ವಿಜಯದಶಮಿಯಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದಾಗಿ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು.
ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟಡಿಯೋಸ್‌ನ ಮೂಲಕ ನಿರ್ಮಾಪಕಿಯಾಗಲಿದ್ದಾರೆ ಎನ್ನುವುದು ವಿಶೇಷ ಆಗಿದೆ.
ರಾಜ್ ಶೆಟ್ಟಿ ಅವರು ಸಿನಿಮಾ ನಿರ್ಮಾಣ ಬಗ್ಗೆ ರಮ್ಯಾ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಈ ಬಗ್ಗೆ ಅಧಿಕೃತವಾಗಿ ನಾಳೆ ಮಾಹಿತಿ ಲಭಿಸಲಿದೆ.
___

Be the first to comment