ನಿರ್ದೇಶನ: ನೂತನ್ ಉಮೇಶ್
ನಿರ್ಮಾಣ: ಕೆ ಸೋಮಶೇಖರ್
ತಾರಾಗಣ: ವಿನೋದ್ ಪ್ರಭಾಕರ್, ಲೇಖಾ ಚಂದ್ರ, ಪಾವನ ಗೌಡ ಇತರರು
ರೇಟಿಂಗ್: 4/5
ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ವಿನೋದ್ ಪ್ರಭಾಕರ್ ಅವರ ಹೊಸ ಚಿತ್ರ ಫೈಟರ್ ತುಂಬಾ ಫೈಟಿಂಗ್ ದೃಶ್ಯಗಳಿವೆ. ಭರಪೂರ ಫೈಟ್ ನಿಂದ ತುಂಬಿರುವ ಫೈಟರ್ ಕತೆಯನ್ನು ಒಂದು ಸಾಲಿನಲ್ಲಿ ಹೇಳುವುದು ಕಷ್ಟ. ಹಲವು ಮಾಫಿಯಾಗಳ ಮೇಲೆ ಫೈಟ್ ಮಾಡುವ ವ್ಯಕ್ತಿಯಾಗಿ ನಾಯಕ ಇಲ್ಲಿ ಕಾಣಿಸಿಕೊಳ್ಳುತ್ತಾನೆ.
ಸಣ್ಣ ವಯಸ್ಸಿನ ಹುಡುಗನ ಮೇಲೆ ನಾಲ್ಕಾರು ನಾಯಿಗಳು ದಾಳಿ ಮಾಡುತ್ತವೆ. ಚಿಕ್ಕ ಹುಡುಗ ನಾಯಿ ದಾಳಿಯಿಂದ ಬದುಕುಳಿಯುವ ದೃಶ್ಯದ ಮೂಲಕ ಸಿನಿಮಾ ಆರಂಭಗೊಳ್ಳುತ್ತದೆ. ಮೊಮ್ಮಗನ ಮೇಲೆ ನಾಯಿಗಳನ್ನು ತಾತ ಯಾಕೆ ಬಿಟ್ಟ ಎನ್ನುವುದಕ್ಕೆ ಚಿತ್ರದ ಕ್ಲೈಮ್ಯಾಕ್ಸ್ ವರೆಗೆ ಕಾಯಬೇಕಾಗುತ್ತದೆ.
ಚಿತ್ರದಲ್ಲಿ ಒಂದು ಫೈಟ್ ಸನ್ನಿವೇಶದ ಬಳಿಕ ಇನ್ನೊಂದು ಕಥೆ ಆರಂಭವಾಗುತ್ತದೆ. ಚಿತ್ರದ ಮೊದಲಾರ್ಧ ಬ್ಲಡ್ ಬ್ಯಾಂಕ್ ಮಾಫಿಯಾದ ಮೇಲೆ ಸಾಗುತ್ತದೆ. ಬಳಿಕ ನಾಯಕಿಯ ಪ್ರವೇಶವಾಗುತ್ತದೆ. ನಾಯಕಿಯ ಬಾಯಿಯಲ್ಲಿ ದ್ವಂದ್ವಾರ್ಥದ ಮಾತುಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ.
ಪ್ರೇಮ ಕಥೆ ಸ್ವಲ್ಪಮಟ್ಟಿಗೆ ಮುಂದುವರೆಯುವ ವೇಳೆಗೆ ಮತ್ತೆ ಮತ್ತೊಬ್ಬ ಖಳನಾಯಕನಾಗಿ ಶರತ್ ಲೋಹಿತಾಶ್ವ ತೆರೆಯ ಮೇಲೆ ಬರುತ್ತಾರೆ. ಅಲ್ಲಿಗೆ ಕಥೆ ಎಲ್ಲಿಗೋ ಸಾಗುತ್ತದೆ. ನಿರ್ದೇಶಕರು ಚಿತ್ರವನ್ನು ಜೂನಿಯರ್ ಆರ್ಟಿಸ್ಟ್ ಗಳಿಂದ ತುಂಬಿಸುವ ಕೆಲಸ ನಡೆದಂತೆ ಭಾಸವಾಗುತ್ತದೆ.
ಸೂಕ್ತ ದಿಕ್ಕಿನಲ್ಲಿ ಸರಿಯಾಗಿ ಕಥೆ ಸಾಗದೆ ಪ್ರೇಕ್ಷಕರಿಗೆ ಸಿನಿಮಾದ ಮುಖ್ಯ ಕಥೆ ಯಾವುದು ಎನ್ನುವುದು ಅವರೇ ಉಳಿಸಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ನಾಯಕ ನಟನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಮಿಳು ನಟಿ ನಿರೋಷ ರಾಧಾ ಅವರು ಜಿಲ್ಲಾಧಿಕಾರಿಯ ಪಾತ್ರಕ್ಕೆ ಕನೆಕ್ಟ್ ಆಗಿದ್ದಾರೆ.
ಗುರುಕಿರಣ್ ಸಂಗೀತ ಕಿವಿಗೆ ಹಿತ ನೀಡುತ್ತದೆ. ಸಿನಿಮಾದ ಹಿನ್ನೆಲೆ ಸಂಗೀತ ಕೂಡಾ ಮನಸ್ಸನ್ನು ಗೆದ್ದಿದೆ. ಶೇಖರ ಚಂದ್ರ ಅವರ ಛಾಯಾಗ್ರಹಣ ಚಿತ್ರವನ್ನು ಸುಂದರವಾಗಿ ತೋರಿಸುವಲ್ಲಿ ಯಶಸ್ವಿ ಯಾಗಿದೆ.
ಸಿನಿಮಾದಲ್ಲಿ ಫೈಟಿಂಗ್ ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ.
____
Be the first to comment