‘ಮಾಲ್ಗುಡಿ ಡೇಸ್’ ಎನ್ನುವಾಗ ಎಲ್ಲರಿಗೂ ನೆನಪಾಗುವ ಹೆಸರು ಶಂಕರ್ ನಾಗ್ ಅವರದ್ದು. ಆದರೆ ಶಂಕರ್ ನಾಗ್ ಅವರ ನಿರ್ದೇಶನದ ಆ ಧಾರಾವಾಹಿಯೊಂದಿಗೆ ಯಾವುದೇ ಸಂಬಂಧ ಇರದಂಥ ಚಿತ್ರ ಇದು. ಆದರೆ ಆ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಾಲಘಟ್ಟಕ್ಕೆ ನಮ್ಮನ್ನು ಕರೆದೊಯ್ಯುವಂಥ ಚಿತ್ರ ಇದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ. ಅವರು ‘ಮಾಲ್ಗುಡಿ ಡೇಸ್’ ಬಿಡುಗಡೆಯ ಪೂರ್ವಭಾವಿಯಾಗಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
“ಇದು ಲಕ್ಷ್ಮೀನಾರಾಯಣ ಮಾಲ್ಗುಡಿ ಎನ್ನುವ ನಿವೃತ್ತ ಕವಿಯೊಬ್ಬರ ಜೀವನ, ಅವರ ನೆನಪುಗಳ ಕುರಿತಾದ ಚಿತ್ರ. 75 ವರ್ಷದ ಈ ಪಾತ್ರವನ್ನು ಮಾಡಿದ ವಿಜಯ ರಾಘವೇಂದ್ರ ಅವರು ನಿರ್ವಹಿಸಿರುವ ರೀತಿ ನಿಜಕ್ಕೂ ಅಮೋಘ. ಚಿತ್ರದಲ್ಲಿ ಎರಡು ಜನರೇಶನ್ ಪಾಯಿಂಟ್ ಆಫ್ ವ್ಯೂ ಇರುತ್ತದೆ. ಚಿತ್ರ ಸ್ವಯಂಪ್ರಭ ಎಂಟರ್ಟೈನ್ಮೆಂಟ್ ಮತ್ತು ಪ್ರೊಡಕ್ಷನ್ ಸಂಸ್ಥೆಯ ಮೂಲಕ ನಿರ್ಮಾಣವಾಗಿದೆ” ಎಂದು ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ ಹೇಳಿದರು. “ಕಳೆದ ಫೆಬ್ರವರಿ 24ರಂದು ಸಿನಿಮಾ ತನ್ನ ಮೂಹೂರ್ತ ವನ್ನು ನೆರವೇರಿಸಿ ಚಿತ್ರೀಕರಣ ಶುರುಮಾಡಲಾಗಿತ್ತು. ಫೆಬ್ರವರಿಯಿಂದ ಆಗಸ್ಟ್ ತನಕ 3 ಹಂತಗಳಲ್ಲಿ ಚಿತ್ರೀಕರಿಸಿ ಎಡಿಟಿಂಗ್, ಡಬ್ಬಿಂಗ್ ಮುಗಿಸಿ ಇದೀಗ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ.
ಒಟ್ಟು 60 ದಿನಗಳ ಚಿತ್ರೀಕರಣವನ್ನು ಬೆಂಗಳೂರು , ಮಂಗಳೂರು, ಮೈಸೂರು, ಶಿವಮೊಗ್ಗ ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿಯ, ಆಗುಂಬೆ, ಸುತ್ತಮುತ್ತ ಮಾಡಲಾಗಿದೆ. ಗಗನ್ ಬಡೇರಿಯಾ ಸಂಗೀತ ನೀಡುತ್ತಿದ್ದು ಒಟ್ಟು 6 ಹಾಡುಗಳು ಇರಲಿದೆ. ಪ್ರದೀಪ್ ನಾಯಕ್ ಸಂಕಲನ, ಉದಯ್ ಲೀಲಾ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದ ನಿರ್ಮಾಪಕ ಕೆ ರತ್ನಾಕರ ಕಾಮತ್ ಈ ಹಿಂದೆ ಅಪ್ಪ ಟೀಚರ್ ಸಿನಿಮಾ ನಿರ್ಮಿಸಿದ್ದರು, ಇದು ಅವರಿಗೆಎರಡನೇ ಸಿನಿಮಾ. ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತಬಿಡುಗಡೆಯಾಗಲಿದೆ.
Be the first to comment