ಶ್ರೀನಿ ನಟನೆ, ನಿರ್ದೇಶನದ ‘ಓಲ್ಡ್‌ಮಾಂಕ್’ ಚಿತ್ರ ಫೆ.25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋದರೆ ಫೆ.25ರಂದು ‘ಓಲ್ಡ್‌ಮಾಂಕ್’ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ವಿಕ್ರಾಂತ್ ರೋಣ’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ಫೆ.25ರಂದೇ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಚಿತ್ರ ಬಿಡುಗಡೆ ಆಗಲಿದೆ.
ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅವರು ‘ರಂಗನಾಯಕಿ’ ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದಾರೆ. ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್‌ನ ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿದ ಖ್ಯಾತಿ ಹೊಂದಿರುವ ಅಭಿಜಿತ್ ಎಂಟರ್‌ಪ್ರೈಸಸ್ ‘ಓಲ್ಡ್‌ಮಾಂಕ್’ ಸಿನಿಮಾ ವಿತರಣೆ ಮಾಡುತ್ತಿದೆ. ಇದು ಅಭಿಜಿತ್ ಎಂಟರ್‌ಪ್ರೈಸಸ್ ವಿತರಣೆ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ.
ಫೆ.5ರಂದು ಸಂಜೆ 7ಗಂಟೆಗೆ ರಿವೆಂಜರ್ಸ್ ಹಾಡು ರಿಲೀಸ್ ಆಗಲಿದೆ. ವಿಭಿನ್ನ ರೀತಿಯ ಪ್ರಚಾರಗಳಿಂದ ಈಗಾಗಲೇ ‘ಓಲ್ಡ್‌ಮಾಂಕ್’ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಓಲ್ಡ್‌ಮಾಂಕ್ ಚಿತ್ರದ ಪೋಸ್ಟರ್ ವಿಮಾನದಲ್ಲಿ ಪ್ರಕಟವಾದಂತೆ ಪೋಸ್ಟರ್ ರೂಪಿಸಿ ಚಿತ್ರತಂಡ ಸಾಕಷ್ಟು ಗಮನ ಸೆಳೆದಿತ್ತು.
“ಒಳ್ಳೆಯ ಸಿನಿಮಾಗಳು ಬಂದರೆ ಜನ ಖಂಡಿತಾ ಥಿಯೇಟರ್‌ಗೆ ಬರುತ್ತಾರೆ. ಮನೆಯಲ್ಲೇ ಕುಳಿತ ಜನರಿಗೂ ಒಂದು ಬ್ರೇಕ್ ಬೇಕಿದೆ. ಇಷ್ಟುದಿನ ಜನರು ತೋರಿಸಿದ ಪ್ರೀತಿಯೇ ನಮಗೆ ಧೈರ್ಯ” ಎಂದು ನಟ, ನಿರ್ದೇಶಕ ಶ್ರೀನಿ ಹೇಳಿದ್ದಾರೆ.
___

Be the first to comment