ಫೆಬ್ರವರಿ 18 ರಂದು ಭಾವಚಿತ್ರ ರಿಲೀಸ್

“ಮಗಳು ಜಾನಕಿ ” ಖ್ಯಾತಿಯ ಗಾನವಿ ಲಕ್ಷ್ಮಣ್ ಅವರ ನಟನೆಯ ‘ಭಾವಚಿತ್ರ ‘ಸಿನಿಮಾ ಫೆಬ್ರವರಿ 18 ರಂದು ಬಿಡುಗಡೆ ಆಗಲಿದೆ.

ಚಿತ್ರದಲ್ಲಿ ‘ಯಾನ ‘ ಸಿನಿಮಾದ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಕುಮಾರ್ ಬಿ ನಿರ್ದೇಶಿಸಿರುವ ‘ಭಾವಚಿತ್ರ’ ಟೆಕ್ನೋ-ಥ್ರಿಲ್ಲರ್ ಸಿನಿಮಾ ಆಗಿದೆ. ಇದು ಹವ್ಯಾಸಿ ಛಾಯಾಗ್ರಾಹಕನ ಪ್ರಯಾಣದ ಕಥೆ ಆಧರಿಸಿದ ಚಿತ್ರವಾಗಿದೆ.

ಗಾನವಿ ಲಕ್ಷ್ಮಣ್ ಅವರು ಭಾವ ಚಿತ್ರ ಸಿನಿಮಾದೊಂದಿಗೆ ಕನ್ನಡ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದರು. ಆದರೆ ಅದಕ್ಕೂ ಮೊದಲು ಹೀರೋ ಸಿನಿಮಾ ರಿಲೀಸ್ ಆಗಿತ್ತು. ಗಾನವಿ ಲಕ್ಷ್ಮಣ್ ಅವರು ಶಿವರಾಜಕುಮಾರ್ ಅವರ ವೇದಾ ಸಿನಿಮಾದಲ್ಲಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರವನ್ನು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜಯ್ ಕುಮಾರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ.

ಶಂಕರ್, ವಿನಾಯಕ ನಾಡಕರ್ಣಿ, ಸಚಿನ್, ರತೀಶ್ ಕುಮಾರ್ ಈ ಸಿನಿಮಾ ಬಂಡವಾಳ ಹೂಡಿದ್ದಾರೆ. ನಿರ್ಮಾಣದ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ ರತೀಶ್ ಕುಮಾರ್. ಗಿರೀಶ್ ಬಿಜ್ಜಳ್, ಗಿರೀಶ್ ಬುಜ್ಜಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಈಗಾಗಲೇ “ಭಾವಚಿತ್ರ” ದ ಟ್ರೇಲರ್ ಬಿಡುಗಡೆಯಾಗಿದೆ. ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದರೂ ರೊಮ್ಯಾಂಟಿಕ್ ಚಿತ್ರದಲ್ಲಿ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಡೈರೆಕ್ಟರ್ ಗಿರೀಶ್ ಕುಮಾರ್ ಈ ಹಿಂದೆ “ಆವಾಹಯಾಮಿ” ಚಿತ್ರವನ್ನು ನಿರ್ದೇಶಿಸಿದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!