ಅನಿತಾ ಭಟ್ ಕ್ರಿಯೇಷನ್ ಅರ್ಪಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘ ಇಂದಿರಾ ‘ ಇದರ ಮೊದಲ ಸಾಂಗ್ ಫೆಬ್ರವರಿ 13ರಂದು ಬಿಡುಗಡೆ ಆಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಯಕ ನಟಿ ಅನಿತಾ ಭಟ್, ” ಚಿತ್ರವನ್ನು ಮಾರ್ಚ್ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗಿದೆ. ಮೊದಲು ಚಿತ್ರದ ಹಾಡುಗಳನ್ನು ರಿಲೀಸ್ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
” ಇಂದಿರಾ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದೆ. ನನ್ನ ಜೊತೆ ನೀತು ಶೆಟ್ಟಿ, ಶಫಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೆಹಮಾನ್, ಚಕ್ರವರ್ತಿ ಚಂದ್ರಚೂಡ್ ಅವರು ತಾರಾ ಬಳಗದಲ್ಲಿ ಇದ್ದಾರೆ. ರೆಹಮಾನ್ ಅವರು ನಂಗೆ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬ್ರೈನ್ ಮ್ಯಾನಿಪುಲೇಶನ್ ಬಗ್ಗೆ ಕಥೆ ಇದೆ. ನಾನು ಇಂದಿರಾ ಕ್ಯಾರೆಕ್ಟರ್ ಮಾಡಿದ್ದೇನೆ. ಇಂದಿರಾ ಗಾಂಧಿ ಅವರಿಗೂ ಈ ಪಾತ್ರಕ್ಕೂ ಸಂಬಂಧ ಇಲ್ಲ. ಇಲ್ಲಿ ರಾಜಕೀಯ ಇಲ್ಲ ” ಎಂದು ಹೇಳಿದ್ದಾರೆ.
” ಲಾಕ್ ಡೌನ್ ಇದ್ದ ವೇಳೆ ಅಪಾರ್ಟ್ ಮೆಂಟ್ ಒಳಗೆ ಶೂಟ್ ಮಾಡಲು ಅವಕಾಶ ಇದ್ದ ಕಾರಣ 30 ದಿನದಲ್ಲಿ ಶೂಟ್ ಕಂಪ್ಲೀಟ್ ಮಾಡಲಾಯಿತು. 20 ದಿನ ಬೆಂಗಳೂರು ಒಂದರಲ್ಲೇ ಶೂಟ್ ಮಾಡಲಾಯಿತು. ಸಕಲೇಶಪುರ, ಮಡಿಕೇರಿಯಲ್ಲಿ ಸಾಂಗ್ ಶೂಟ್ ಮಾಡಲಾಗಿದೆ. ಒಂದು ಸಾಂಗ್ ಇಡೀ ಮಡಿಕೇರಿಯಲ್ಲಿ ಶೂಟ್ ಮಾಡಲಾಗಿದೆ” ಎಂದು ಅನಿತಾ ಭಟ್ ಮಾಹಿತಿ ನೀಡಿದ್ದಾರೆ.
” ಚಿತ್ರಕ್ಕೆ ಲೋಹಿತ್ ನಾಯಕ್ ಸಂಗೀತ ನೀಡಿದ್ದಾರೆ. ಇವರು ಬಳೇ ಪೇಟೆ ಚಿತ್ರಕ್ಕೆ ಸಹ ಮ್ಯೂಸಿಕ್ ನೀಡಿದ್ದರು. ಕೊರಿಯೋಗ್ರಫಿ ಅಭಿಷೇಕ್, ಡೈರೆಕ್ಷನ್ ಋಷಿಕೇಶ್ ಅವರದ್ದು” ಎಂದು ನಿರ್ಮಾಪಕಿಯೂ ಆಗಿರುವ ಅನಿತಾ ಭಟ್ ಹೇಳಿದ್ದಾರೆ.

Be the first to comment