ಸಿನಿಮಾ, ರಿಯಾಲಿಟಿ ಶೋ, ಕಾಸ್ಟೂಮ್​ ಡಿಸೈನಿಂಗ್​, ಫ್ಯಾಷನ್​ ಕ್ಷೇತ್ರದಲ್ಲಿ ರಶ್ಮಿ ಮಿಂಚು

ಸಿನಿಮಾ ಕ್ಷೇತ್ರಕ್ಕೆ ಫ್ಯಾಷನ್​ ಕ್ಷೇತ್ರದ ನಂಟಿದೆ. ಸಿನಿಮಾ ಕ್ಷೇತ್ರದಲ್ಲಿ ಫ್ಯಾಷನ್​ ಡಿಸೈನಿಂಗ್​ನಿಂದ ಹಿಡಿದು, ಕಾಸ್ಟೂಮ್​ ಡಿಸೈನ್, ಮೇಕ್​ ಓವರ್​, ಸೆಲೆಬ್ರಿಟಿ ಫ್ಯಾಷನ್​ ಡಿಸೈನಿಂಗ್​ ಹೀಗೆ ವಿಫುಲ ಅವಕಾಶಗಳಿವೆ. ಅಂಥ ಒಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ರಶ್ಮಿ ಅನೂಪ್ ರಾವ್.

ಅರುಲಾ ಹೆಸರಿನ ಬ್ಯೂಟಿಕ್​ ತೆರೆದು, ಅಲ್ಲಿಂದ ಆರಂಭವಾದ ಅವರ ಸಣ್ಣ ಜರ್ನಿ ಇದೀಗ, ಸೆಲೆಬ್ರಿಟಿ ಕಾಸ್ಟೂಮ್​ ಡಿಸೈನಿಂಗ್​, ರಿಯಾಲಿಟಿ ಶೋ ಕಾಸ್ಟೂಮ್​ವರೆಗೆ ಬಂದು ನಿಂತಿದೆ. ಇದೆಲ್ಲದರ ಜತೆಗೆ ಸಿನಿಮಾ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಂಡಿರುವ ರಶ್ಮಿ, ಕಳೆದ ಮೂರು ವರ್ಷಗಳಲ್ಲಿ 15ಕ್ಕೂ ಅಧಿಕ ಸಿನಿಮಾಗಳಿಗೆ ಕಾಸ್ಟೂಮ್​ ಡಿಸೈನರ್​ ಆಗಿ ಕೆಲಸ ಮಾಡಿದ್ದಾರೆ.
ಈ ಬಗ್ಗೆ ಮಾತನಾಡುವ ಅವರು, ಅಗ್ನಿಸಾಕ್ಷಿ ಚಂದ್ರಿಕಾ ಅವರ ಪಾತ್ರಕ್ಕೆ ಮೇಕ್​ ಓವರ್​ನಿಂದ ಹಿಡಿದು ಕಾಸ್ಟೂಮ್​ ಡಿಸೈನಿಂಗ್​ನಿಂದ ಈ ಪಯಣ ಶುರುವಾಗಿದೆ. ಅಲ್ಲಿಯವರೆಗೂ ವಿಜಯನಗರದಲ್ಲಿ ಚಿಕ್ಕ ಬ್ಯೂಟಿಕ್​ ನಡೆಸುತ್ತಿದ್ದೆ. ಅಲ್ಲಿಂದ ಕಲರ್ಸ್ ಕನ್ನಡದ ಬಿಗ್​ಬಾಸ್​ ಶೋಗೆ ನಾನೇ ಕಾಸ್ಟೂಮ್​ ಡಿಸೈನ್​ ಮಾಡಿದೆ. ಅದಾದ ಬಳಿಕ ಅವರದೇ ಅನುಬಂಧ ಅವಾರ್ಡ್​ ಕಾರ್ಯಕ್ರಮಕ್ಕೂ ಅವಕಾಶ ಸಿಕ್ಕಿತು. ಸದ್ಯ ಕಾಮಿಡಿ ಕಿಲಾಡಿಗಳು ಶೋದ ಯೋಗರಾಜ್​ ಭಟ್​ ಅವರಿಗೂ ಕಾಸ್ಟೂಮ್ ಡಿಸೈನ್​ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸುತ್ತಾರವರು.

ಹರಿಪ್ರಿಯಾ ನಟಿಸಿರುವ ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೇ ಇಲ್ಲಿ ತನಕ, ಗಾಳಿಪಟ 2, ಬನಾರಸ್​, ಕಬ್ಜ, ಮುಗಿಲ್​ಪೇಟೆ, ತ್ರಿಬಲ್ ರೈಡಿಂಗ್ ಹೀಗೆ 3 ವರ್ಷಗಳಲ್ಲಿ 15ಕ್ಕೂ ಅಧಿಕ ಸಿನಿಮಾಗಳಿಗೆ ರಶ್ಮಿ ಕೆಲಸ ಮಾಡಿದ್ದಾರೆ. ಪಕ್ಕದ ತೆಲುಗು ಇಂಡಸ್ಟ್ರಿಗಳಿಂದಲೂ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ.

2013ರಲ್ಲಿ ಆರಂಭವಾದ ಈ ಪಯಣ ಇದೀಗ ಎಂಟು ವರ್ಷಗಳನ್ನು ಪೂರೈಸಿದೆ. ಫ್ಯಾಷನ್​ ಕ್ಷೇತ್ರದಲ್ಲಿ ಸಾಕಷ್ಟು ಎಕ್ಸ್​ಪಿರಿಮೆಂಟ್​ಗಳನ್ನು ಮಾಡಿದ್ದೇನೆ. ಇದೀಗ ನಾನು ಮಾಡಿದ್ದನ್ನು ಇನ್ನೂ ಹಲವು ಜನರಿಗೆ ಕಲಿಸುವ ಆಸೆಯೂ ಇದೆ. ಹೋದಲೆಲ್ಲ ಸಾಕಷ್ಟು ಜನ ನನಗೆ ಕೇಳಿದ್ದುಂಟು. ಕಲಿಸಿಕೊಡುತ್ತೀರಾ ಎಂದು. ಹಾಗಾಗಿ ಮುಂದೊಂದಿನ ಬ್ಯೂಟಿಕ್​ ಕೋರ್ಸ್ ಶುರುಮಾಡುವ ಕನಸಿದೆ ಎಂಬುದು ರಶ್ಮಿ ಮಾತು.

ಕಾಸ್ಟೂಮ್ ಡಿಸೈನಿಂಗ್, ಗ್ರೂಮಿಂಗ್, ಮೇಕ್ಓವರ್, ಸೆಲೆಟ್ರೀಟಿ ಸ್ಟೈಲಿಂಗ್, ಸೆಲೆಬ್ರಿಟಿ ಡಿಸೈಲಿಂಗ್, ವೆಡ್ಡಿಂಗ್ ಕಾಸ್ಟೂಮ್, ರಿಯಾಲಿಟಿ ಶೋಗೆ ಕಾಸ್ಟೂಮ್​ ಡಿಸೈನಿಂಗ್​ ಮಾಡಿದ್ದಾರೆ. ರ್ಯಾಂಪ್​ ಮೇಲೆ ವಾಕ್​ ಮಾಡುವ ರೂಪದರ್ಶಿಗಳಿಗೆ ಫ್ಯಾಷನ್​ ಕೌನ್ಸೆಲಿಂಗ್​ ಸೇರಿ ಈ ಕ್ಷೇತ್ರದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ಇವರ ಕೈಯಲ್ಲಿ ಐದು ಸಿನಿಮಾಗಳಿವೆ. ಸಿನಿಮಾ ಕ್ಷೇತ್ರದತ್ತಲೂ ಹೆಚ್ಚು ಒಲವು ಮೂಡಿದ್ದು, ಅಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.

r

Be the first to comment

Leave a Reply

Your email address will not be published. Required fields are marked *

Translate »
error: Content is protected !!