ಬಹುತೇಕ ಜನ ಫ್ಯಾಶನ್ ಹಾಗೂ ಪ್ರದರ್ಶನವನ್ನು ಅತಿರೇಕವೆಂದು ಭಾವಿಸುತ್ತಾರೆ. ಆದರೆ ಜಗತ್ತಿನೆದುರು ಅಭಿವ್ಯಕ್ತಗೊಳ್ಳಬೇಕಾದರೆ ಉತ್ತಮ ಫ್ಯಾಷನ್ ಅಭಿರುಚಿ ಹೊಂದಿರಲೇಬೇಕು. ಅದ್ರಲ್ಲೂ ಸಿನಿರಂಗದಲ್ಲಿ ಕೇಳಬೇಕಾ, ನಾಯಕ, ನಾಯಕಿ ಉತ್ತಮ ಉಡುಪು ಧರಿಸಿದ್ದಾರೆ ಅಂದ್ರೆ ಸಾಕು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟಾಕ್ ಕ್ರಿಯೇಟ್ ಆಗುತ್ತೆ. ಅಷ್ಟರ ಮಟ್ಟಿಗೆ ಫ್ಯಾಷನ್ ಪ್ರಪಂಚ ಇಂದು ಗವನಸೆಳೆಯುತ್ತಿದೆ.
ಇಂತಹ ಫ್ಯಾಷನ್ ಪ್ರಪಂಚದಲ್ಲಿ ಸಾಧನೆ ಮಾಡಿರೋದು ಲಕ್ಷ್ಮೀ ಕೃಷ್ಣ. ಲಂಡನ್ ಮೂಲದ ವಿನ್ಯಾಸಕಿ ಆಗಿರುವ ಲಕ್ಷ್ಮೀ ಕೃಷ್ಣ ಅವ್ರ ಫ್ಯಾಷನ್ ಡಿಸೈನಿಂಗ್ ಕುರಿತಾಗಿ ಒಂದು ಪುಟ್ಟ ಸಂದರ್ಶನ ಇಲ್ಲಿದೆ.
*ಫ್ಯಾಷನ್ ಪ್ರಪಂಚಕ್ಕೆ ಕಾಲಿಡಬೇಕು ಅಂತ ಅನಿಸಿದ್ದು ಯಾಕೆ ? ಮತ್ತು ಹೇಗೆ ?
ನಾನು ಓದಿದ್ದು ಬೆಳೆದದ್ದು ಎಲ್ಲ ಲಂಡನ್ನಲ್ಲಿ . ಅಪ್ಪ ಅಮ್ಮನಿಗೆ ನಾನು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಅಂತ ಆಸೆ ಇತ್ತು. ಲಂಡನ್ನಲ್ಲಿ ಹೇಗೆ ಅಂದ್ರೆ ನಮಗೆ 3 ಗಂಟೆ ನಂತ್ರ ಯಾವುದೇ ಕ್ಲಾಸ್ಗಳು ನಡಿಯುತ್ತಿರಲಿಲ್ಲ. ಹಾಗಾಗಿ ಬಿಡುವಿದ್ದಾಗ ಡ್ರೆಸ್ ಡಿಸೈನ್ ಕಡೆ ಒಲವು ಮೂಡ್ತು. ಹಾಗೇ ಡಿಸೈನ್ ಮಾಡ್ತಾ ಮಾಡ್ತಾ.. ಈ ಫ್ಯಾಷನ್ ಲೋಕದಲ್ಲಿ ಇಂಟರೆಸ್ಟ್ ಶುರುವಾಯ್ತು.
*ನಿಮಗೆ ಸಿಕ್ಕ ಮೊದಲ ಅವಕಾಶ ?
ಫ್ಯಾಷನ್ ಅಂದ್ರೆನೆ ನನಗೆ ನೆಚ್ಚಿನ ಕ್ಷೇತ್ರ. ಹೀಗಾಗಿ ಈ ಕ್ಷೇತ್ರದಲ್ಲಿ ಏನಾದ್ರು ಸಾಧನೆ ಮಾಡಬೇಕೆನ್ನುವ ಸಮಯದಲ್ಲಿ ನನಗೊಂದು ಅವಕಾಶ ಸಿಕ್ತು. ನನ್ನ ಸ್ನೇಹಿತೆಗೆ ಒಂದು ಡ್ರೆಸ್ ಡಿಸೈನ್ ಮಾಡಿಕೊಟ್ಟೆ. ಆ ಡ್ರೆಸ್ ಡಿಸೈನ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ತು. ಇದ್ರ ಜೊತೆಗೆ ನಿರ್ದೇಶಕರೊಬ್ಬರು ತಮ್ಮ ಸಿನಿಮಾಗೆ ವಸ್ತ್ರ ವಿನ್ಯಾಸ ಮಾಡಿಕೊಡುವಂತೆ ಕೇಳಿಕೊಂಡರು. ಅಲ್ಲಿಂದ ಸಿನಿಮಾ ಇಂಡಸ್ಟ್ರೀಯ ನಂಟು ಹಂತ ಹಂತವಾಗಿ ಬೆಳೀತಾ ಹೋಯ್ತು.
*ಯಾವ್ದೆಲ್ಲಾ ಪ್ರಾಜೆಕ್ಟ್ಗಳು ನಿಮ್ಮ ಕೈಯಲ್ಲಿವೆ?
ಸದ್ಯಕ್ಕೆ ಈಗ ನಿರ್ದೇಶಕ ದಯಾಳ್ ಪದ್ಮನಾಭ್ ಸರ್ ಜೊತೆ ಒಂದು ಪ್ರಾಜೆಕ್ಟ್ ಮಾಡ್ತಿದ್ದೀನಿ. ಇದ್ರೊಂದಿಗೆ ಉಪ್ಪಿ ಸರ್ ಜೊತೆಯಲ್ಲೂ ಮಾತುಕತೆ ನಡೆದಿದೆ. ಎಲೆಕ್ಷನ್ ಆದ್ಮೇಲೆ ಅದು ಫೈನಲೈಸ್ ಆಗುತ್ತೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಸಾಂಗ್ಸ್ಗಳಿಗೆ ಡಿಸೈನ್ ಮಾಡಲು ಅವಕಾಶ ಸಿಕ್ಕಿದೆ. ಲೂಸ್ ಮಾದ ಯೋಗಿ ಹಾಗೂ ಹರಿಪ್ರಿಯ ಅವ್ರ ಫಸ್ಟ್ ಡವ್ ಅನ್ನೋ ಸಿನಿಮಾಗೆ ಅವಕಾಶ ಸಿಕ್ತಿದೆ. ಇನ್ನೂ ನಮೋ ಅಂತ ಐದು ಹೀರೋಗಳಿಗೆ ಡಿಸೈನ್ ಮಾಡ್ತಿದ್ದೀನಿ. ಲಿಸಾ ಅನ್ನೋ ನನ್ನ ಫಸ್ಟ್ ಪ್ರಾಜೆಕ್ಟ್ ಮೂವಿ ಈಗ ರಿಲೀಸ್ ಆಗ್ತಿದೆ. ಸದ್ಯಕ್ಕೆ ಈಗ ಸಿಕ್ಕ ಸಿಕ್ಕ ಅವಕಾಶಗಳನ್ನ ಒಪ್ಪೊಕೊಳ್ಳೊದೆ, ಸ್ವಲ್ಪ ಚ್ಯೂಸಿ ಆಗಿದ್ದೀನಿ. ಕನ್ನಡದಲ್ಲಿ ಚಂದನ್ ಶೆಟ್ಟಿ ಮಾಡ್ತಿರುವ ಫಸ್ಟ್ ಇಂಗ್ಲಿಷ್ ಆಲ್ಬಂ ಸಾಂಗ್ ಬರ್ತಿದೆ ಅದಕ್ಕೆ ದಿಗಂತ್ ಆಕ್ಟ್ ಮಾಡ್ತಿದ್ದಾರೆ. ಫಾದರ್ಸ್ ಡೇ ದಿನ ಈ ಸಾಂಗ್ ರಿಲೀಸ್ ಆಗ್ತಿದ್ದು ದಿಗಂತ್ ಐದು ವಿಭಿನ್ನ ಕಾಸ್ಟೈಮ್ನಲ್ಲಿ ಕಾಣಿಸಿಕೊಳ್ತಾರೆ ಅದನ್ನು ಸಹ ನಾನೇ ಡಿಸೈನ್ ಮಾಡ್ತಿದ್ದೀನಿ.
*ಸಾಮಾನ್ಯಾವಾಗಿ ಸಿನಿ ತಾರೆಯರಿಗೆ ಅವರವರದೇ ಆದ ಡ್ರೆಸ್ ಡಿಸೈನರ್ಸ್ ಇರ್ತಾರೆ. ನಿಮಗೆ ಆ ರೀತಿ ಯಾರಿಂದಾದ್ರು ಅವಕಾಶ ಸಿಕ್ಕಿದ್ಯಾ?
ನಾನು ಸಾಕಷ್ಟು ಜನರಿಗೆ ಡ್ರೆಸ್ ಡಿಸೈನ್ ಮಾಡ್ತೀದ್ದೀನಿ. ಒಬ್ರಿಗೆ ಅಂತ ನಾನು ಯಾವತ್ತು ಫಿಕ್ಸ್ ಆಗಲ್ಲಾ. ರೂಪ ನಟರಾಜ್, ಸಾಕ್ಷೀ, ಜೀವಿತಾ ಸಾಗರ್, ಅಕ್ಷತಾ ಪಾಂಡವಪುರ, ಇಶಿತಾ ವರ್ಷ ಅಗ್ನಿ ಸಾಕ್ಷೀ ಕಿರುತೆರೆ ಧಾರವಾಹಿ ನಟಿ, ಹಾಗೂ ಮಲಯಾಳಂನ ನೇಹಾ ಸೆಕ್ಸೇನಾ ನಾಯಕಿ ನಟಿಗೂ ನಾನು ಡಿಸೈನ್ ಮಾಡಿದ್ದೀನಿ. ನನ್ನ ಪ್ರಕಾರ ಒಬ್ಬರಿಗೆ ಫಿಕ್ಸ್ ಆಗದೇ ಎಲ್ಲರಿಗೂ ವಿಭಿನ್ನ ಶೈಲಿಯ ವಸ್ತ್ರ ವಿನ್ಯಾಸ ಮಾಡಿದ್ರೆ ಖಂಡಿತವಾಗ್ಲೂ ನಮ್ಮ ಕ್ರಿಯೇಟಿವಿ ಇನ್ನೂ ಹೆಚ್ಚಾಗುತ್ತೆ ಅನ್ನೋ ಮನೋಭಾವ ನನ್ನದು.
*ಯಾವ ರೀತಿಯ ವಸ್ತ್ರ ವಿನ್ಯಾಸಕ್ಕೆ ನೀವು ಹೆಚ್ಚು ಆದ್ಯತೆ ಕೊಡುತ್ತೀರ?
ನನಗೆ ಕಲರ್ ಜೊತೆ ಆಟಡೋದು ಅಂದ್ರೆ ತುಂಬಾ ಇಷ್ಟ. ನನ್ನ ಬಹುತೇಕ ಡೀಸೈನರ್ ಎಲ್ಲ ಪ್ಲೋರಲ್ ತರಹ ಇರುತ್ವೆ. ನನ್ನ ಡಿಸೈನರ್ನಲ್ಲಿ ತುಂಬಾನೇ ವಿಂಟೇಜ್ , ಲಂಡನ್ ಸ್ಟೈಲ್ ಹೊಂದಿದೆ. ಸಿಂಪಲ್ ಡ್ರೆಸ್ನನ್ನೇ ಎಲಿಗೆಂಟ್ ಆಗಿ ಮಾಡೋದು ನನ್ನ ಸ್ಪೆಷಾಲಿಟಿ. ಬರೀ ಡ್ರೆಸ್ ಮಾತ್ರ ಅಲ್ಲ, ಅವ್ರು ಹಾಕೋ ಜ್ಯೂವೆಲರಿ, ಸ್ಯಾಂಡಲ್ಸ್, ಹೇರ್ಸ್ಟೈಲ್ ಪ್ರತಿಯೊಂದು ನಾನು ಸೆಲೆಕ್ಟ್ ಮಾಡಿ ಕಂಪ್ಲೀಟ್ ಡ್ರೆಸ್ ಡಿಸೈನ್ ಮಾಡಿ ಕೊಡೋದೆ ನನ್ನ ಹವ್ಯಾಸ. ನನ್ನ ಮೋದಿ ಸೀರೆ, ಹಾಗೂ ಪೇಪರ್ ಡಿಸೈನ್ ಸೀಸನ್ ಇತ್ತೀಚೆಗಂತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.
ಪ್ರಶಸ್ತಿಗಳ ಬಗ್ಗೆ ಹೇಳೋದಾದ್ರೇ?
ಇತ್ತೀಚೆಗಷ್ಟೇ ನನಗೆ ಕರ್ನಾಟಕ ಬೆಸ್ಟ್ ಅಚೀವರ್ ಇನ್ ಫ್ಯಾಷನ್ ಡಿಸೈನಿಂಗ್ ಅವಾರ್ಡ್ ಸಿಕ್ತು. ಹಾಗೂ ಕಾಲೇಜುಗಳಲ್ಲಿ ನಡೆಯುವ ಫ್ಯಾಷನ್ ಶೋನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೀನಿ. ಗಾಜಿನ ಚೂರುಗಳು ಹಾಗೂ ಬೀದಿ ದೀಪಗಳಿಂದ ಮಾಡಿದಂಥ ಡ್ರೆಸ್ ಡಿಸೈನ್ ಬಾಲಿವುಡ್ ನಟಿ ಕಂಗನಾ ರಣಾವತ್ ಗೂ ಸಹ ತುಂಬಾನೇ ಇನ್ಸ್ಪೈರ್ ಮಾಡ್ತು. ಮಿಸ್ ಫೆಮಿನಾ ಫೈನಲಿಸ್ಟ್ ನ್ಯಾಷನಲ್ ರೌಂಡ್ನಲ್ಲೂ ನಾನು ಮಾಡಿದ ವಸ್ತ್ರ ವಿನ್ಯಾಸವೇ ಹೈಲೈಟ್ ಆಯ್ತು. ಹಾಗೂ ಕೆಲವಷ್ಟು ಕ್ಯಾಲೆಂಡರ್ಗಳ ಪೋಟೋ ಶೂಟ್ಗೂ ಸಹ ನನ್ನದೇ ಡ್ರೆಸ್ ಡಿಸೈನ್ ಫೈನಲ್ ಆಗಿರೋದು ಖುಷಿ ಕೊಟ್ಟಿದೆ. ಪದ್ಮಾವತ್ ಬ್ರೈಡಲ್ ಡ್ರೆಸ್, ನನ್ನದೇ ಆದ ಆಡ್ ಫಿಲ್ಮ್ ಹಾಗೂ ಕಿಡ್ಸ್ ಫ್ಯಾಷನ್ ವೀಕ್ ಕೂಡ ಏರ್ಪಡಿಸಿದ್ದು ಉತ್ತಮ ಪ್ರತಿಕ್ರಿಯೇ ಸಿಕ್ಕಿರೋದು ನನ್ನ ಸಾಧನೆಗೆ ಇನ್ನೊಂದು ಗರಿ ಸಿಕ್ಕಂತಾಯ್ತು.
*ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದಿದೆಯೇ?
ನಾನು ಕೇವಲ ಫ್ಯಾಷನ್ ಡಿಸೈನಿಂಗ್ ಮಾತ್ರವಲ್ಲ . ಉತ್ತಮ ಭರತನಾಟ್ಯ ನೃತ್ಯಗಾರ್ತಿ ಕೂಡ ಹೌದು. ಹೀಗಾಗಿ ನನ್ನ ನೋಟ , ಮಾತಾಡುವ ಶೈಲಿ ಎಲ್ಲ ನೋಡಿ ಕೆಲವಷ್ಟು ಆಫರ್ಸ್ಗಳು ಕೂಡ ಬಂದ್ವು. ಆದ್ರೆ ಸದ್ಯಕ್ಕೆ ನನ್ನ ಪ್ಯಾಷನ್ ವಸ್ತ್ರ ವಿನ್ಯಾಸ ಆಗಿರೋದ್ರಿಂದ ಸದ್ಯಕ್ಕೆ ಸಿನಿಮಾ ಕಾನ್ಸಟ್ರೇಟ್ ಮಾಡ್ತಿಲ್ಲ.
ಆದ್ರೆ ನಾನು ಕಿವಿಮಾತು ಹೇಳಿದಿಷ್ಟೇ ಫ್ಯಾಷನ್ ಡಿಸೈನಿಂಗ್ನಲ್ಲಿ ಒಳ್ಳೇದು ಇದೆ. ಕೆಟ್ಟದ್ದು ಇದೆ,
ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ತಂದೆ ತಾಯಿ ಏನು ಹೇಳ್ತಾರೆ.
ನನಗೆ ಡಾಕ್ಟರ್ ಅಥವಾ ಇಂಜಿನಯರ್ ಬಿಟ್ಟು ಬೇರೆ ಚಾಯ್ಸ್ ಇರಲಿಲ್ಲ. ಆದ್ರೆ ನನಗೆ ಸಿಕ್ಕ ಅವಕಾಶಗಳು ನೋಡಿ ನನ್ನ ತಂದೆ ಹಾಗೂ ತಾಯಿಗೆ ತುಂಬಾನೇ ಖುಷಿಯಾಗಿದೆ. ನನ್ನ ರಿಲೆಟೀವ್ಸ್, ಫ್ರೆಂಡ್ಸ್ ಜೊತೆ ಎಲ್ಲಾದ್ರು ಹೊರಗಡೆ ಬಂದ್ರೆ ಸಾಕು ತುಂಬ ಜನ ಮ್ಯಾಡಮ್ ಸೆಲ್ಫಿ ಅಂತಾರೆ. ಇದನ್ನ ನೋಡಿ ಎಲ್ಲರಿಗೂ ತುಂಬಾನೇ ಖುಷಿಯಾಗಿದೆ. ಅದ್ರಲ್ಲೂ ಅವಾರ್ಡ್ಗಳು ಹಾಗೂ ಸಾಕಷ್ಟು ಹೊಸ ಹೊಸ ಪ್ರಾಜೆಕ್ಟ್ಗಳು ಬರ್ತಿರೋದ್ರಿಂದ ನನ್ನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ನಾನೇ ಆರಿಸಿಕೊಂಡ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಇದೆ.
#Bheemaraya -BCINEMAS
Pingback: CI/CD