ಸಿಲ್ಕ್‌ ಸ್ಮಿತಾ

ಖ್ಯಾತ ನಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ ಘೋಷಣೆ

ಸೌತ್‌ ನ ಖ್ಯಾತ ನಟಿ, ಐಟಂ ಡಾನ್ಸರ್‌ ಸಿಲ್ಕ್‌ ಸ್ಮಿತಾ ಬರ್ತ್‌ಡೇ ಹಿನ್ನೆಲೆಯಲ್ಲಿ STRI Cinemas ಸಂಸ್ಥೆ ಕಡೆಯಿಂದ ಹೊಸ ಚಿತ್ರದ ಘೋಷಣೆ ಆಗಿದೆ. “ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌” ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.

ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ರವನ್ನು ತೆರೆಮೇಲೆ ತರುವವರು ಯಾರು ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಚಂದ್ರಿಕಾ ರವಿ, ತೆರೆಮೇಲೆ ಸ್ಮಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಸಿಲ್ಕ್‌ ಸ್ಮಿತಾ

ಈ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶನ ಮಾಡಲಿದ್ದು, ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

ಸಿಲ್ಕ್‌ ಸ್ಮಿತಾ ಅವರ ಜನ್ಮದಿನದಂದು ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಅನಾವರಣಗೊಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!