ನ.21ರಂದು ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್

ಮನೋಜ್ ಬಾಜ್ಪಾಯಿ ನಟನೆಯ ‘ಫ್ಯಾಮಿಲಿ ಮ್ಯಾನ್ 3’ ವೆಬ್ ಸರಣಿ ನವೆಂಬರ್ 21ರಂದು ಈ ವೆಬ್ ಸರಣಿ ಪ್ರದರ್ಶನ ಆರಂಭಿಸಲಿದೆ.

‘ಫ್ಯಾಮಿಲಿ ಮ್ಯಾನ್ 3’ ವೆಬ್ ಸರಣಿಯ ಬಿಡುಗಡೆ ಬಗ್ಗೆ ಅಮೇಜಾನ್ ಪ್ರೈಮ್ ವಿಡಿಯೋ  ಅಪ್ಡೇಟ್ ನೀಡಿದೆ. ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಮನೋಜ್ ಅವರು ಶ್ರೀಕಾಂತ್ ತಿವಾರಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಪಾರ್ಟ್​ನಲ್ಲೂ ಅವರ ಪಾತ್ರ ಮುಂದುವರಿಯಲಿದೆ. ಈ ಸರಣಿಯಲ್ಲಿ ವೈರಸ್ ಬಗ್ಗೆ ಹೇಳಲಾಗುತ್ತದೆ ಎನ್ನಲಾಗುತ್ತಿದೆ.

ಫ್ಯಾಮಿಲಿ ಮ್ಯಾನ್ ಸರಣಿಯ  ಬಗ್ಗೆ  ಊಹಾಪೋಹಗಳು   ಹರಿದಾಡಿದ್ದವು. ‘ಫ್ಯಾಮಿಲಿ ಮ್ಯಾನ್ 3’ ಬರೋದಿಲ್ಲ ಎಂಬ ಮಾತುಗಳು ಕೇಳಿ ಬಂದವು. ಈಗ ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

‘ಫ್ಯಾಮಿಲಿ ಮ್ಯಾನ್ 3’ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಬಿಡುಗಡೆ ಕಂಡಿರೋ ಎರಡು ಸರಣಿಗಳು ಸೃಷ್ಟಿ ಮಾಡಿರೋ ಹೈಪ್​ನಿಂದ ಮೂರನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಉಗ್ರರ ದಾಳಿಯ ಬಗ್ಗೆ ಮೊದಲೇ ಮಾಹಿತಿ ಪಡೆದು  ದಾಳಿ ಆಗದಂತೆ ತಡೆಯೋದು ಶ್ರೀಕಾಂತ್ ತಿವಾರಿ ಕೆಲಸ. ಶ್ರೀಕಾಂತ್ ತಿವಾರಿ ಜೊತೆ ಜೆಕೆ ತಲ್ಪಡೆ, ಸುಚಿತ್ರಾ ತಿವಾರಿ, ದೃತಿ ತಿವಾರಿ ಮೊದಲಾದ ಪಾತ್ರಗಳು ಪ್ರಮುಖವಾಗಿವೆ. ಕಳೆದ ಸೀಸನ್​ನಲ್ಲಿ ಸಮಂತಾ ಅವರು ಮುಖ್ಯಭೂಮಿಕೆಯಲ್ಲಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!