ಸದ್ದು ಮಾಡುತ್ತಿದೆ ‘ಫ್ಯಾಮಿಲಿ ಡ್ರಾಮ’ ಟೈಟಲ್ ಟ್ರ್ಯಾಕ್

ಆಕರ್ಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ  ‘ಫ್ಯಾಮಿಲಿ ಡ್ರಾಮ’ದ ಟೈಟಲ್ ಟ್ರ್ಯಾಕ್ ಕ್ರಿಯೇಟಿವಾಗಿ ಆಗಿ ಸದ್ದು ಮಾಡುತ್ತಿದೆ.

ಟ್ರೈಲರ್ ಮೂಲಕ ಗಮನ ಸೆಳೆದಿರುವ ‘ಫ್ಯಾಮಿಲಿ ಡ್ರಾಮ’ದ   ಟೈಟಲ್ ಟ್ರ್ಯಾಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಯುವ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಫ್ಯಾಮಿಲಿ ಡ್ರಾಮಾ’ ಹಾಡು  ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

ಗಾಯಕ ವಾಸುಕಿ ವೈಭವ್ ಧ್ವನಿಯಲ್ಲಿ ಮೂಡಿ ಬಂದಿರುವ ‘ ಲಿ ಲಿ ಫ್ಯಾಮಿಲಿ…’ ಹಾಡು ಕೇಳೋಕೆ ಎಷ್ಟು ಮಜವಾಗಿದೆಯೋ ನೋಡೊಕು ಅಷ್ಟೇ ಕುತೂಹಲಕಾರಿಯಾಗಿದೆ. ಈ ಹಾಡಿಗೆ ಚೇತನ್ ಅಮ್ಮಯ್ಯ ಸಂಗೀತ ಸಂಯೋಜನೆ ಮಾಡಿದ್ದು ಶರತ್ ವಶಿಷ್ಠ ಹಾಗೂ ಚೇತನ್ ಅಮ್ಮಯ್ಯ ಜಂಟಿಯಾಗಿ ಸಾಹಿತ್ಯ ಬರೆದಿದ್ದಾರೆ.

ಈ ಹಾಡಿನಲ್ಲಿ ಪಾರ್ಟಿ ನಡೆಯುತ್ತಿದ್ದು ಅಭಯ್, ಸಿಂಧು, ಅನಯ್ಯಾ  ಗ್ಯಾಂಗ್ ಯಾರನ್ನೊ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಆದರೆ ಹಮುಂದೇನಾಗುತ್ತೆ ಎನ್ನುವುದು ಸಿನಿಮಾದಲ್ಲಿಯೇ ನೋಡಬೇಕು.

ಚಿತ್ರದಲ್ಲಿ ಅಭಯ್, ಅನನ್ಯಾ ಅಮರ್, ಸಿಂಧು ಶ್ರೀನಿವಾಸ್ ಮೂರ್ತಿ, ರೇಖಾ, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ಸಿನಿಮಾಗೆ ಡಬ್ಬುಗುಡಿ ಮುರಳಿಕೃಷ್ಣ ಅವರು ತಮ್ಮ DMK ಎಂಟರ್ಟೈನ್ಮೆಂಟ್ ಮೂಲಕ ಬಂಡವಾಳ ಹೂಡಿದ್ದಾರೆ.

 ‘ಫ್ಯಾಮಿಲಿ ಡ್ರಾಮ’ ಡಾರ್ಕ್ ಕಾಮಿಡಿ ಸಿನಿಮಾ ಇದಾಗಿದ್ದು ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯಾಗಿದೆ. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!