Marichi Movie : ನಿರೀಕ್ಷೆ ಮೂಡಿಸಿದ ಮರೀಚಿ ಚಿತ್ರ ; ನ.24ಕ್ಕೆ ರಾಜ್ಯಾದ್ಯಂತ‌ ಬಿಡುಗಡೆ

ಹೊಸ ನಿರ್ದೇಶಕ ಸಿದ್ದ್ರುವ್ (ಸಿದ್ದು) ಅವರ ಕ್ರೈಂ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮರೀಚಿ ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸೋನು ಗೌಡ ಅವರು ವಿಜಯ್ ರಾಘವೇಂದ್ರ ಅವರ ಪತ್ನಿಯಾಗಿ ಚಿತ್ರದಲ್ಲಿ ಇದ್ದಾರೆ. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಚಿತ್ರವನ್ನು ಸಿದ್ದ್ರುವ್ (ಸಿದ್ದು) ಹಾಗೂ ಸಂತೋಷ್ ಮಾಯಪ್ಪ ಅವರು ನಿರ್ಮಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯುಡ್ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ರೀತಿಯ ಕಥೆಯ ಸಿನಿಮಾದಲ್ಲಿ ನಾನು ಹಿಂದೆ ನಟಿಸಿದ್ದೆ. ಆದರೆ ಈ ಕಥೆಯನ್ನು ಬಿಡಲು ಮನಸಾಗಲಿಲ್ಲ. ಈ ಚಿತ್ರ ಒಂದು ಮೈಲುಗಲ್ಲಾಗಿ ನಿಲ್ಲಲಿದೆ ಎಂದು ವಿಜಯ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ನಾನು ವಿಜಯರಾಘವೇಂದ್ರ ಅವರ ಪತ್ನಿಯಾಗಿ ನಟಿಸಿದ್ದೆ. ಈ ಚಿತ್ರದಲ್ಲೂ ಪತ್ನಿಯಾಗಿ ನಟಿಸಿದ್ದೇನೆ. ಈ ಸಿನಿಮಾ ಯಾವಾಗ ನೋಡುತ್ತೇನೆ ಎಂದು ಅನಿಸಿತೊಡಗಿದೆ ಎಂದು ನಾಯಕಿ ಸೋನು ಗೌಡ ಹೇಳಿದ್ದಾರೆ.

ಈ ಚಿತ್ರ ನನ್ನ ಬಹುದಿನದ ಕನಸು. ಚಿತ್ರದ ಕಥೆ ನೋಡುಗರಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ನಿರ್ದೇಶಕ ಸಿದ್ದು ಹೇಳಿದ್ದಾರೆ.

ಮರೀಚಿ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!