The Vacant House : ನ.17ಕ್ಕೆ ‘ದಿ ವೆಕೆಂಟ್ ಹೌಸ್’ ರಾಜ್ಯಾದ್ಯಂತ ತೆರೆಗೆ ; ಇದು ಎಸ್ತರ್ ನರೋನ್ಹಾ ಹೊಸ ಕನಸು

ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಇನಾಮ್ದಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬ್ಯೂಟಿ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಕನಸ್ಸಿಗೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ SRV ಥಿಯೇಟರ್ ನಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಟಿ ಎಸ್ತಾರ್ ನರೋನ್ಹಾ ಮಾತನಾಡಿ, ದಿ ವೆಕೆಂಟ್ ಹೌಸ್..ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತಾ ಸಾಗುವ ಕಥೆ. ಈಗಿನ ಯೂತ್ ಗೆ ಬಹಳ ಕನೆಕ್ಟ್ ಆಗುವ ಸಿನಿಮಾವಿದು. ಪ್ರೀತಿ ಮತ್ತು ಎಮೋಷನ್ ಎರಡನ್ನು ಸೇರಿ ಎಣೆದ ಕಥೆ. ಡೈರೆಕ್ಷನ್ ಮಾಡಿದ್ದು ಖುಷಿ ಅನಿಸಿತು. ನನ್ನ ವಿಷನ್ ನ್ನು ನಾನು ಓಪನ್ ಆಗಿ ಹೇಳುವ ಸ್ವಾತಂತ್ರ ನನ್ನ ಸಿನಿಮಾದಲ್ಲಿ ಸಿಕ್ಕಿದೆ. ನಾನು ಎಂಟು ವರ್ಷದಿಂದ ಸಿಂಗರ್.. ನಾನು ರಂಗಭೂಮಿಗೆ ಬಂದಿದ್ದು ಸಿಂಗರ್ ಆಗಿಯೇ..ಹೀಗಾಗಿ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1.40 ನಿಮಿಷವಿದೆ. ಎಲ್ಲಿಯೂ ಬೋರಿಂಗ್ ಹೊಡೆಸಲ್ಲ. ಚಿತ್ರದ ಮೇಲೆ ನಿಮ್ಮ ಬೆಂಬಲವಿರಲಿ ಎಂದರು.

‘ದಿ ವೆಕೆಂಟ್ ಹೌಸ್’ ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದ್ದರೆ, ವಿಜಯ್ ರಾಜ್ ಸಂಕಲನವಿದೆ. ‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧರಿತ ಸಿನಿಮಾ ಮಾಡಲಾಗಿದೆ.

ಅಂದ್ಹಾಗೆ ಎಸ್ತರ್‌ ನರೋನ್ಹಾ ಮಂಗಳೂರಿನವರಾದರು. ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಕನ್ನಡ ಸಿನಿಮಾ ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಎಸ್ತರ್ ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಷ್ಟು ವರ್ಷದ ನಟನೆ ಅನುಭವವನ್ನು ಧಾರೆ ಎರೆದು ದಿ ವೆಕೆಂಟ್ ಹೌಸ್ ಸಿನಿಮಾ ನಿರ್ದೇಶಿಸಿ ನಟಿಸಿ ತಮ್ಮದೇ ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ನಿರ್ಮಾಣ ಕೂಡ ಮಾಡಿದ್ದಾರೆ. ಇದೇ ತಿಂಗಳ 17ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!