ಒಂದಷ್ಟು ಟ್ವಿಸ್ಟ್, ಟರ್ನ್ ಗಳ ಮೂಲಕ ಬೆಚ್ಚಿ ಬೀಳಿಸದ ನಿಧಾನಗತಿಯ ಸಿನಿಮಾವಾಗಿ ದಿ ವೆಕೆಂಟ್ ಹೌಸ್ ಈ ವಾರ ತೆರೆಯ ಮೇಲೆ ಬಂದಿದೆ.
ಜೀವನ ಉತ್ಸಾಹವನ್ನು ಕಳೆದುಕೊಂಡ ಸ್ಕೂಲ್ ಟೀಚರ್ ಒಬ್ಬ, ಖಾಲಿ ಇರುವ ಪಕ್ಕದ ಮನೆಗೆ ವಯಸ್ಸಾದ ಗಂಡ ತನ್ನ ಚಿಕ್ಕ ವಯಸ್ಸಿನ ಹೆಂಡತಿ ಜೊತೆ ಆಗಮಿಸಿದಾಗ ಹೊಸ ಹುರುಪನ್ನು ಕೊಂಡುಕೊಳ್ಳುತ್ತಾನೆ. ಬಳಿಕ ಚಿಕ್ಕ ವಯಸ್ಸಿನ ಹೆಂಡತಿ ಹಾಗೂ ಟೀಚರ್ ನಡುವೆ ಗೆಳೆತನ, ಜಗಳ ಎಲ್ಲವೂ ಶುರುವಾಗುತ್ತದೆ. ಈ ನಡುವೆ ನಡೆಯುವ ಘಟನೆಯೊಂದು ಅವರಿಬ್ಬರ ಬದುಕನ್ನು ಬದಲಿಸುತ್ತದೆ. ಆ ಘಟನೆ ಏನು? ಅವರಿಬ್ಬರು ಒಂದಾಗುತ್ತಾರಾ ಎನ್ನುವುದಕ್ಕೆ ಚಿತ್ರ ನೋಡಬೇಕಿದೆ.
ಚಿತ್ರದಲ್ಲಿ 5 ಪಾತ್ರಗಳಿವೆ. ಆದರೆ ಚಿತ್ರದ ಕಥೆ ಪ್ರಮುಖವಾಗಿ ಎರಡು ಪಾತ್ರಗಳ ಸುತ್ತ ಸಾಗುತ್ತದೆ. ನಟಿಯಾಗಿ ಎಸ್ತರ್ ನರೊನ್ಹಾ ನೋಡುಗರ ಗಮನವನ್ನು ಸೆಳೆಯುತ್ತಾರೆ. ಶ್ರೇಯಸ್ ಚಿಂಗ ನಟನೆಯಲ್ಲಿ ಸ್ವಲ್ಪ ಪಕ್ವತೆ ಕಾಣಬೇಕಿತ್ತು ಎಂದು ಅನಿಸುತ್ತದೆ. ಉಳಿದಂತೆ ಸಂದೀಪ್ ಮಲಾನಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
102 ನಿಮಿಷದ ಸಿನಿಮಾ ಕುಂಟತ್ತಾ ತೆವಳುತ್ತಾ ಸಾಗುವುದು ನಿರ್ದೇಶಕರು ಎಡವಿರುವುದಕ್ಕೆ ಸಾಕ್ಷಿಯಾಗಿದೆ. ಆದರೂ ನಿರ್ದೇಶಕಿ ಹೊಸ ಟ್ವಿಸ್ಟ್ ಹಾಗೂ ಟರ್ನ್ ಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಯತ್ನವನ್ನು ಮಾಡಿದ್ದಾರೆ. ನಿರೂಪಣೆಯಲ್ಲಿ ಬಿಗಿ ಇದ್ದಲ್ಲಿ ಚಿತ್ರ ಇನ್ನಷ್ಟು ಚೆನ್ನಾಗಿ ಬರುತ್ತಿತ್ತು.
ಹಾರರ್ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ದಿ ವೆಕೆಂಟ್ ಹೌಸ್ ನಿರಾಸೆ ಮಾಡಲಾರದು ಎಂದಷ್ಟೇ ಹೇಳಬಹುದು.
____
Be the first to comment