80-90ರ ದಶಕದಲ್ಲಿ ಬೆಂಗಳೂರು ನಗರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಜಯರಾಜ್ ಕುರಿತಾದ ಸಾಕಷ್ಟು ಚಿತ್ರಗಳು ತೆರೆಗೆ ಬಂದಿದೆ. ಬರುತ್ತಲೆ ಇದೆ. ಆ ಸಾಲಿಗೆ ’ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾವು ಶುಕ್ರವಾರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ವಸತಿ ಸಚಿವ ಸೋಮಣ್ಣ ಕ್ಯಾಮಾರ ಆನ್ ಮಾಡಿದರೆ, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಚಿತ್ರದಲ್ಲಿ ಜಯರಾಜ್ ಪುತ್ರ ನಾಯಕನಾಗಿ ಅಭಿನಯಿಸುತ್ತಿರುವುದು ವಿಶೇಷ. ಹಾಗಂತ ಅಪ್ಪನಾಗಿ ಕಾಣಿಸಿಕೊಳ್ಳುತ್ತಿಲ್ಲ.
ಸಾಮಾನ್ಯ ಹುಡುಗನಾಗಿ ಕಷ್ಟಪಟ್ಟು ಒಂದು ಹಂತಕ್ಕೆ ಹೇಗೆ ಬರುತ್ತಾನೆ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಾಸ್ ಸಿನಿಮಾ ಮಾಡಬೇಕೆಂಬ ಬಯಕೆ ಇದರ ಮೂಲಕ ಈಡೇರಿದೆ. ಅಪ್ಪನ ಹೆಸರು ಒಳ್ಳೆಯದನ್ನೆ ಮಾಡಿದೆ ಎಂದು ಅಜಿತ್ಜಯರಾಜ್ ಉರುಫ್ ಜಾಂಡಿ ಹೇಳಿಕೊಂಡಿದ್ದಾರೆ. ಟೈಟಲ್ಬೇಕಾ, ಹಫ್ತಾ ನಿರ್ದೇಶನ ಮಾಡಿರುವ ಆನಂದ್ರಾಜ್ ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರ ಸೇವೆ ಮಾಡಿರುವ ಸುಗುರ್ಕುಮಾರ್ ಅವರು ಸುಗುರ್ ಸಿನಿ ಪ್ರೊಡಕ್ಷನ್ಸ್ ಮೂಲಕ ಮೂರನೇ ಬಾರಿ ನಿರ್ಮಾಣ ಮಾಡುತ್ತಿದ್ದಾರೆ.
ರೌಡಿ ಪಾತ್ರದಲ್ಲಿ ಯಾರು ನಟಿಸುತ್ತಾರೆಂಬುದನ್ನು ತಂಡವು ಗೌಪ್ಯವಾಗಿಟ್ಟಿದೆ. ಹಾಗೆಯೇ ಕನ್ನಡದ ನಾಯಕಿಯನ್ನು ಆಯ್ಕೆ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ಜಯರಾಜ್ ಸಾಯುವ ಮುನ್ನ ನಡೆದ ಘಟನೆಗಳು ಹಾಗೂ ಸತ್ತ ಮೇಲೆ ಏನಾಗುತ್ತೆ. ಕಾಪೋರೇಟ್ ಹಂತ, ರೈತರ ಅಂಶಗಳು ಭೂಗತ ಲೋಕದಲ್ಲಿ ಯಾವ ರೀತಿ ಪಾತ್ರವಹಿಸಲಿದೆ ಎಂಬುದನ್ನು ಹೇಳಲಾಗುತ್ತಿದೆ. ಶೀರ್ಷಿಕೆಯಲ್ಲಿ ಅರ್ಧ ಕಾಲ್ಪನಿಕ, ಬಾಕಿ ನೈಜತೆ ಇರಲಿದೆ. ಇದೂರೆಗೂ ನೋಡಿರದ ಬೆಂಗಳೂರನ್ನು ಇಲ್ಲಿ ನೋಡಬಹುದು. ಭಾಗ 1 ಮತ್ತು 2ರಲ್ಲಿ ಚಿತ್ರವು ಬರಲಿರುವುದು ವಿಶೇಷ.
ಸಂಪೂರ್ಣ ಚಿತ್ರೀಕರಣ ಬೆಂಗಳೂರುದಲ್ಲಿ ನಲವತ್ತೈದು ದಿನಗಳ ಕಾಲ ನಡೆಸಲು ಯೋಜನೆ ಹಾಕಲಾಗಿದೆ. ಮೂರು ಅಂಡರ್ವರ್ಲ್ಡ್, ಒಂದು ಪ್ರೀತಿ ಕುರಿತಾದ ಹಾಡುಗಳಿಗೆ ಲೋಕೇಶ್-ವಿಜೇತ್ ಸಂಗೀತ ಸಂಯೋಜಿಸುತ್ತಿದ್ದಾರೆ. ತಾರಗಣದಲ್ಲಿ ತಾರ, ಶರತ್ಲೋಹಿತಾಶ್ವ, ಬುಲ್ಲಿಯಾಗಿ ಪೆಟ್ರೋಲ್ಪ್ರಸನ್ನ, ಪುಡಿ ರೌಡಿ ಕಿಶನ್ಬಳಗಲಿಗೆ ಜೋಡಿಯಾಗಿ ಸೋನುಪಾಟೀಲ್, ಉಳಿದಂತೆ ಸಚಿನ್ಪುರೋಹಿತ್, ಆನಂದ್, ಮೈಕೋನಾಗರಾಜ್, ರಾಜವರ್ಧನ್ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಅರ್ಜುನ್ಅಕೋಟ್, ಸಾಹಸ ಬಂಡೆಚಂದ್ರು ಅವರದಾಗಿದೆ.

Be the first to comment