ಮೂರು ದಶಕಗಳಿಗೂ ಹೆಚ್ಚು ಕಾಲ ಒಂದಾಗಿ ಕೆಲಸ ಮಾಡಿದ ಮಣಿರತ್ನಂ–ಎ ಆರ್ ರೆಹಮಾನ್ ಲೆಜೆಂಡರಿ ಕಾಂಬಿನೇಶನ್ ಮುರಿದಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
1992ರಲ್ಲಿ ಬಿಡುಗಡೆಯಾದ ‘ರೋಜಾ’ ಸಿನಿಮಾದಿಂದ ಆರಂಭವಾದ ಮಣಿರತ್ನಂ–ಎಆರ್ ರೆಹಮಾನ್ ಜರ್ನಿ ಇತ್ತೀಚಿನ ‘ಥಗ್ ಲೈಫ್’ ವರೆಗೆ ಮುಂದುವರಿದಿತ್ತು. ಮಣಿರತ್ನಂ ನಿರ್ದೇಶನದ ಬಹುತೇಕ ಎಲ್ಲಾ ಸಿನಿಮಾಗಳಿಗೂ ಎ ಆರ್ ರೆಹಮಾನ್ ಸಂಗೀತ ನೀಡಿದ್ದು, ಅವರ ಹಾಡುಗಳು ಟ್ರೆಂಡಿಂಗ್ನಲ್ಲಿವೆ. ಇದೀಗ ಮಣಿರತ್ನಂ ತಮ್ಮ ಹೊಸ ಸಿನಿಮಾಕ್ಕೆ ಹೊಸ ದಾರಿಯನ್ನು ಹಿಡಿದು ಅಚ್ಚರಿ ಮೂಡಿಸಿದ್ದಾರೆ.
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ಹೊಸ ಸಿನಿಮಾಕ್ಕೆ 21 ವರ್ಷದ ಯುವ ಸಂಗೀತ ನಿರ್ದೇಶಕ ಸಾಯಿ ಅಭಯಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಿರ್ಧಾರ ಸಿನಿ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಮಣಿರತ್ನಂ ಅವರ ಮೊದಲ 10 ಸಿನಿಮಾಗಳಿಗೆ ಇಳಯರಾಜ ಸಂಗೀತ ನೀಡಿದರು. ನಂತರ ‘ರೋಜಾ’ ಮೂಲಕ ಎಆರ್ ರೆಹಮಾನ್ ಅವರನ್ನು ಪರಿಚಯಿಸಿದರು. ಇದೀಗ ಮತ್ತೆ ಹೊಸ ಸಂಗೀತ ನಿರ್ದೇಶಕ ಮಣಿರತ್ನಂ ಜೊತೆ ಕೆಲಸ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಇದು ಮಣಿರತ್ನಂ ಜೊತೆ ಅವರ ಎರಡನೇ ಸಿನಿಮಾ. ಮಣಿರತ್ನಂ ಜೊತೆ ಸಾಯಿ ಪಲ್ಲವಿ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ.
—–





Be the first to comment