ಕಂಗನಾ ರಣೌತ್ ಅಭಿನಯದ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ 4 ದಿನಗಳಷ್ಟೇ ಬಾಕಿ ಇದ್ದು, ತಮ್ಮ ಎಮರ್ಜೆನ್ಸಿ ಸಿನಿಮಾಗೇ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು CBFC ವಿರುದ್ಧಕಂಗನಾ ಗಂಭೀರ ಆರೋಪ ಮಾಡಿದ್ದಾರೆ.
ಸಿಬಿಎಫ್ ಸಿ ಸಿನಿಮಾದ ಪ್ರಮಾಣಪತ್ರ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದು, ಇದರ ಪರಿಣಾಮವಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಕತ್ತರಿಸಿದ ಆವೃತ್ತಿಗೆ ಅನುಮತಿ ನೀಡದೇ ಇದ್ದಲ್ಲಿ ಸಿಬಿಎಫ್ ಸಿ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಕಂಗನಾ ಹೇಳಿದ್ದಾರೆ.
”ನನ್ನ ಸಿನಿಮಾ ವಿರುದ್ಧವೂ ಎಮರ್ಜೆನ್ಸಿ ಹೇರಲಾಗಿದೆ. ಇದು ಅತ್ಯಂತ ಹತಾಶ ಸ್ಥಿತಿಯಾಗಿದೆ. ನನ್ನ ದೇಶದಲ್ಲಿರುವ ಪರಿಸ್ಥಿತಿಗಳ ಬಗ್ಗೆ ನನಗೆ ನಿರಾಶೆಯಾಗುತ್ತಿದೆ. ಇನ್ನೂ ಎಷ್ಟು ಹೆದರಿಕೊಂಡಿರಬೇಕು? “ನಾನು ಈ ಚಿತ್ರವನ್ನು ತುಂಬಾ ಸ್ವಾಭಿಮಾನದಿಂದ ಮಾಡಿದ್ದೇನೆ. ಅದಕ್ಕಾಗಿಯೇ CBFC ಯಾವುದೇ ವಿವಾದವನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಶಿರೋಮಣಿ ಅಕಾಲಿ ದಳ, ಶುಕ್ರವಾರ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ರಾಣಾವತ್ ಅವರ ಚಲನಚಿತ್ರ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ. ಚಿತ್ರ ತಪ್ಪು ಮಾಹಿತಿ ಹರಡಬಹುದು ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿದೆ. ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಿಖ್ ಸಂಸ್ಥೆ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಯಲಿದೆ.
ನಿರ್ಮಾಪಕರು ಇನ್ನೂ CBFC ಯಿಂದ ಪ್ರಮಾಣೀಕರಣವನ್ನು ಸ್ವೀಕರಿಸದ ಕಾರಣ ಶುಕ್ರವಾರ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಇದೆ.
Be the first to comment