ಮಾರ್ಚ್ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ‘ಎಮರ್ಜೆನ್ಸಿ’ ಬಿಡುಗಡೆ

ಬಾಲಿವುಡ್ ನಟಿ ಕಂಗನಾ ರನೌತ್ ಅವರ “ಎಮರ್ಜೆನ್ಸಿ” ಚಿತ್ರ ಮಾರ್ಚ್ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಕಂಗನಾ ರನೌತ್ ಅವರು ನಿರ್ದೇಶಿಸಿ ನಿರ್ಮಿಸಿ, ಅಭಿನಯಿಸಿದ ಈ ಚಿತ್ರವು ತುರ್ತು ಪರಿಸ್ಥಿತಿಯ ಕಥಾ ಹಂದರವನ್ನು ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದಾರೆ.

ಇಂದಿರಾ ಗಾಂಧಿಯವರ ಹಳೆಯ ಚಿತ್ರದ ಜೊತೆಗೆ ‘ಎಮರ್ಜೆನ್ಸಿ’ ಚಿತ್ರದ ಸ್ಟಿಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಂಗನಾ, “ಮಾರ್ಚ್ 17 ರಂದು @netflix ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹಿಮಾಚಲ ಪ್ರದೇಶದ ಮಂಡಿ ಬಿಜೆಪಿ ಸಂಸದೆ ಕಂಗನಾ ರನೌತ್ ಹೇಳಿದ್ದಾರೆ.

ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ ಎಂಬ ಆರೋಪದ ಮೇಲೆ   ವಿವಾದಕ್ಕೆ ಕಾರಣವಾಗಿದ್ದ “ಎಮರ್ಜೆನ್ಸಿ” ಚಿತ್ರ ಹಲವಾರು ಅಡೆತಡೆಗಳ ನಡುವೆ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC)   ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಸೆಪ್ಟೆಂಬರ್ 6, 2024 ರಂದು “ಎಮರ್ಜೆನ್ಸಿ” ಬಿಡುಗಡೆಯಾಗಿರಲಿಲ್ಲ.

1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ 21 ತಿಂಗಳ ತುರ್ತು ಪರಿಸ್ಥಿತಿಯನ್ನು ದಾಖಲಿಸುವ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿರುವ ರನೌತ್, ಇಂದಿರಾ ಗಾಂಧಿ ಬಗ್ಗೆ ನನಗೆ ಸಹಾನುಭೂತಿ ಇದೆ. ಈ ಪಾತ್ರದಲ್ಲಿ ನಟಿಸುವವರೆಗೂ ಇಂದಿರಾ ಗಾಂಧಿ ಅವರು ತುಂಬಾ ಶಕ್ತಿಶಾಲಿ ಎಂದು ಪರಿಗಣಿಸಿದ್ದೆ. ಆದರೆ ನಾನು ನನ್ನ ಸಂಶೋಧನೆ ಮಾಡಿದಾಗ, ಅದು ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ನನಗೆ ಅರ್ಥವಾಯಿತು. ನೀವು ದುರ್ಬಲರಾಗಿದ್ದಷ್ಟೂ, ನೀವು ಹೆಚ್ಚು ನಿಯಂತ್ರಣವನ್ನು ಬಯಸುತ್ತೀರಿ ಎಂಬ ನನ್ನ ನಂಬಿಕೆಯನ್ನು ಅದು ಬಲಪಡಿಸಿತು. ಇಂದಿರಾ ಗಾಂಧಿ  ತುಂಬಾ ದುರ್ಬಲ ವ್ಯಕ್ತಿ, ಅವರಿಗೆ ತಮ್ಮ ಬಗ್ಗೆ ಖಚಿತತೆ ಇರಲಿಲ್ಲ ಎಂದಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!