ರಾ. ಸೂರ್ಯ ನಿರ್ದೇಶನದ ‘ಎಲ್ಟು ಮುತ್ತಾ ‘ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ವಿಜಯ್ ಕಿರಗಂದೂರು ಪತ್ನಿ ಶೈಲಜಾ, ಸಂಗೀತ ಗಟ್ಟಿ ಹಾಗೂ ಎ ಎಂ ಆರ್ ರಮೇಶ್ ಅವರು ‘ಎಲ್ಟು ಮುತ್ತಾ ‘ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದರು.
‘ಎಲ್ಟು ಮುತ್ತಾ ‘ ಸಿನಿಮಾ ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಹೊಂದಿದೆ. ಇದು ನೈಜ ಘಟನೆ ಆಧರಿಸಿದ ಸಿನಿಮಾ ಆಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಎಂದು ನಿರ್ದೇಶಕ ರಾ. ಸೂರ್ಯ ಹೇಳಿದರು.
ಚಿತ್ರದ ನಾಯಕನಾಗಿ ಶೌರ್ಯ ಪ್ರತಾಪ್ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ನಟಿಸಿದ್ದಾರೆ. ಕಾಕ್ರೋಚ್ ಸುದಿ, ಯಮುನಾ ಶ್ರೀನಿಧಿ, ನವೀನ್ ಪಡೀಲ್ ‘ಎಲ್ಟು ಮುತ್ತಾ ‘ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ.
‘ಎಲ್ಟು ಮುತ್ತಾ ‘ ಚಿತ್ರದ ರಿಲೀಸ್ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ. ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಡಬ್ಬಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಪ್ರಸನ್ನ ಕೇಶವ ಸಂಗೀತ, ಮೆಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಮಾಡಿದ್ದಾರೆ.

Be the first to comment