ಎಲ್ಲೋ ಜೋಗಪ್ಪ ನಿನ್ನರಮನೆ

Movie Review: ಭಾವನಾತ್ಮಕ ಕಥೆಯ ‘ಎಲ್ಲೋ ಜೋಗಪ್ಪ ನಿನ್ನರಮನೆ’

ಚಿತ್ರ: ಎಲ್ಲೋ ಜೋಗಪ್ಪ ನಿನ್ನರಮನೆ
ನಿರ್ದೇಶಕ: ಹಯವದನ
ತಾರಾಗಣ: ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಶ್ವ, ದಿನೇಶ್ ಮಂಗಳೂರು ಇತರರು
ರೇಟಿಂಗ್: 3.5

ಕೌಟುಂಬಿಕ ಭಾವನಾತ್ಮಕ ಚಿತ್ರ ಈ ವಾರ ತೆರೆಗೆ ಬಂದಿರುವ ‘ಎಲ್ಲೋ ಜೋಗಪ್ಪ ನಿನ್ನರಮನೆ’.

ಇದೊಂದು ತಾಯಿ, ಮಗ, ತಂದೆ, ಪ್ರೇಮ, ಪ್ರಣಯ ಈ ಎಲ್ಲಾ ಕಥೆಗಳನ್ನು ಒಗ್ಗೂಡಿಸಿ ತೆರೆಯ ಮೇಲೆ ತಂದಿರುವ ಚಿತ್ರ. ಪ್ರವಾಸದ ಕಥನದ ಮೂಲಕ ನಿರ್ದೇಶಕರು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಯತ್ನವನ್ನು ಮಾಡಿದ್ದಾರೆ.

ಬೆಟ್ಟಿಂಗ್ ನಿಂದ ಊರು ಬಿಟ್ಟ ಅಪ್ಪನನ್ನು ಹುಡುಕುವ ಮಗ, ಅಪ್ಪನ ಕೋಪಕ್ಕೆ ಕಾರಣವಾಗುವ ರೀಲ್ಸ್ ಮಾಡಿಕೊಂಡ ಮಗ, ಇಷ್ಟವಾಗದ ಯುವಕನನ್ನು ಮದುವೆಯಾಗಲು ಒಪ್ಪದ ಯುವತಿ, ಈ ರೀತಿಯ ಹಲವು ಪಾತ್ರಗಳು ಚಿತ್ರದಲ್ಲಿದೆ. ಭಾವನಾತ್ಮಕವಾಗಿ ಸಾಗುವ ಕಥೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಯತ್ನವನ್ನು ಮಾಡುತ್ತದೆ.

ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂದೇಶವನ್ನು ನೀಡುವ ಯತ್ನ ಮಾಡಲಾಗಿದೆ. ಅಂಜನ್ ನಾಗೇಂದ್ರ ಚಿತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ನಾಯಕಿ ವೆನ್ಯಾ ರೈ, ಸಂಜನಾ ದಾಸ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಶರತ್ ಲೋಹಿತಾಶ್ವ, ಸ್ವಾತಿ, ವೈಜನಾಥ್ ಬಿರಾದರ್ ನಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!