ಎಲ್ಲಿಗೆ ಪಯಣ ಯಾವುದೋ ದಾರಿ

Ellige Payana Yavudo Dari Movie Review: ‘ಪಯಣ’ದಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್!

ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿ
ನಿರ್ದೇಶನ: ಕಿರಣ್ ಎಸ್ ಸೂರ್ಯ
ತಾರಾಗಣ: ಅಭಿಮನ್ಯು ಕಾಶೀನಾಥ್, ಸ್ಪೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ ಇತರರು
ರೇಟಿಂಗ್: 3.5

ನಾಲ್ವರು ಪಾತ್ರಧಾರಿಗಳ ನಿಗೂಢ ಪಯಣದ ದಾರಿಯ ಕಥೆಯನ್ನು ಹೇಳುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಈ ವಾರ ತೆರೆಗೆ ಬಂದಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’.

ಹಳೆಯ ಕಾರು ಒಂದರಲ್ಲಿ ವಿಲಕ್ಷಣ ವ್ಯಕ್ತಿ ಒಬ್ಬ ಸೈಕೋಪಾತ್ ಇರುವ ವಿರಾಜಪೇಟೆ ಕಡೆಗೆ ಹೊರಡುತ್ತಾನೆ. ಇವನ ಜೊತೆಗೆ ಮೂವರು ಅಪರಿಚಿತರು ಕಾರಿಗೆ ಹತ್ತುತ್ತಾರೆ. ಇವರೆಲ್ಲ ವಿರಾಜಪೇಟೆಗೆ ಯಾಕೆ ಹೋಗುತ್ತಾರೆ? ಇವರಲ್ಲಿ ಒಬ್ಬ ಸೈಕೋ ಪಾತ್ ಇರಬಹುದೇ? ಈ ರೀತಿಯ ಹಲವು ಕುತೂಹಲಗಳನ್ನು ಚಿತ್ರ ಮೂಡಿಸುತ್ತದೆ. ಈ ಥ್ರಿಲ್ಲರ್ ಅನುಭವವನ್ನು ಪಡೆಯಲು ಚಿತ್ರವನ್ನು ನೋಡುವುದು ಒಳ್ಳೆಯದು.

ಚಿತ್ರದ ನಿರೂಪಣೆ , ಕಥೆ ಓಡುವ ರೀತಿ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಆರಂಭದಿಂದ ಕೊನೆಯವರೆಗೆ ಕುತೂಹಲವನ್ನು ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಹಲವು ತಿರುವುಗಳ ಮೂಲಕ ಆಸಕ್ತಿಕರ ಸಿನಿಮಾವಾಗಿ ಇದು ಮೂಡಿ ಬಂದಿದೆ.

ಚಿತ್ರದ ನಾಯಕ ಅಭಿಮನ್ಯು ಕಾಶಿನಾಥ್, ನಾಯಕಿ ಸ್ಪೂರ್ತಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದ ಕಲಾವಿದರು ಕಥೆಗೆ ತಕ್ಕಂತೆ ನಟಿಸಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನೋಡುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!