ಅಕ್ಟೋಬರ್ 11ಕ್ಕೆ ‘ಎಲ್ಲಿದೆ ಇಲ್ಲಿ ತನಕ’ ಬಿಡುಗಡೆ

ಲೋಕೇಶ್ ಪ್ರೋಡಕ್ಷನ್ ಲಾಂಛನದಲ್ಲಿ ಸೃಜನ್ ಲೋಕೇಶ್ ಅವರು ನಿರ್ಮಿಸಿರುವ ‘ಎಲ್ಲಿದೆ ಇಲ್ಲಿ ತನಕ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಅಕ್ಟೋಬರ್ 11ರಂದು ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ.

ಅರುಣ್ ರಾಮದಾಸ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗಣೇಶ್ ಮಲ್ಲಯ್ಯ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ನಿರ್ದೇಶನ, ಮದನ್ – ಹರಿಣಿ, ಮುರಳಿ, ಕಲೈ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ಕಶ್ಮೀರ ಹಾಗೂ ಮಲೇಶಿಯಾದಲ್ಲಿ ಚಿತ್ರೀಕರಣ ನಡೆದಿದೆ.

ಸೃಜನ್ ಲೋಕೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಹರಿಪ್ರಿಯ. ಗಿರಿಜಾ ಲೋಕೇಶ್, ಸಾಧುಕೋಕಿಲ, ತಾರಾ, ಅವಿನಾಶ್, ತಬಲನಾಣಿ, ಯಶಸ್ ಸೂರ್ಯ, ರಾಧಿಕಾ ರಾವ್, ಗಿರಿ, ಎಂಎಸ್.ಉಮೇಶ್, ಸಿಹಿಕಹಿ ಚಂದ್ರು, ರಂಗ ವಿಶ್ವ ಮುಂತಾದವರು `ಎಲ್ಲಿದೆ ಇಲ್ಲಿ ತನಕ` ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!