election: ಚುನಾವಣಾ ರಂಗು, ಸಿನಿಮಾ ಬಿಡುಗಡೆ ಮಂಕು

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು ಈ ಅಬ್ಬರದ ಮಧ್ಯೆ ಈ ವಾರ ಯಾವುದೇ ಕನ್ನಡ​ ಸಿನಿಮಾಗಳು ತೆರೆ ಕಾಣದೆ ಮಂಕಾಗಿವೆ.

ಮೇ 10 ರಂದು ಮತದಾನ ನಡೆಯಲಿದೆ. ಮತದಾನದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ನಾಯಕರು ಅಬ್ಬರದ ಮತ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ಕನ್ನಡ ಚಿತ್ರರಂಗ ಮಂಕಾಗಿದ್ದು, ಈ ವಾರ ಚಲನಚಿತ್ರ ನಿರ್ಮಾಪಕರು ಯಾವುದೇ ಸಿನಿಮಾಗಳನ್ನು ಬಿಡುಗಡೆ ಮಾಡುವ ಮನಸ್ಸು ಮಾಡಿಲ್ಲ.

ಶುಕ್ರವಾರ ಸೇರಿದಂತೆ ವಾರದಲ್ಲಿ ಕಡಿಮೆ ಅಂದರೂ 10 ರಿಂದ 12 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಮೇ 8ರ ತನಕ ಚುನಾವಣಾ ಪ್ರಚಾರದ ಅಬ್ಬರ ಇರಲಿದೆ. ಹೆಚ್ಚಿನ ಸಂಖ್ಯೆಯ ಸಿನಿಮಾ ಸೆಲೆಬ್ರಿಟಿಗಳು ಅಭ್ಯರ್ಥಿಗಳ‌ ಪರ ಪ್ರಚಾರ ಮಾಡುತ್ತಿದ್ದಾರೆ‌.‌ ಪ್ರೇಕ್ಷಕರಿಗೆ ಸಿನಿಮಾ ನಟರನ್ನು ಮುಖಾಮುಖಿಯಾಗಿ ನೋಡುವುದರಲ್ಲಿ ಇರುವ ಉತ್ಸಾಹ ಅವರ ಚಿತ್ರ ನೋಡುವುದರಲ್ಲಿ ಇಲ್ಲದ ಕಾರಣ ಈ ವಾರ ಚಿತ್ರಗಳಿಗೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ.

ಚೇತನ್ ಚಂದ್ರ ಅಭಿನಯದ ‘ಪ್ರಭುತ್ವ’ ಸಿನಿಮಾ ಈ‌ ವಾರ ಬಿಡುಗಡೆ ಆಗಬೇಕಿತ್ತು. ಆದರೆ ಎಲೆಕ್ಷನ್ ಪ್ರಚಾರದ ನಡುವೆ ‘ಪ್ರಭುತ್ವ’ ಚಿತ್ರತಂಡ ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿ‌ದೆ. ಚುನಾವಣೆ ಕನ್ನಡ ಸಿನಿಮಾಗಳಿಗೆ‌ ದೊಡ್ಡ ಹೊಡೆತ ಕೊಟ್ಟಿದೆ.‌

ಕಳೆದ ವಾರ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’, ವಿಜಯ್‌ ರಾಘವೇಂದ್ರ ಅಭಿನಯದ ‘ರಾಘು’‌ ಸಿನಿಮಾಗಳು ತೆರೆ ಕಂಡಿದ್ದವು. ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ಇದರ ಕ್ರೇಜ್ ಈ ವಾರವೂ ಮುಂದುವರೆಯುವ ನಿರೀಕ್ಷೆ ಇದೆ. ಚುನಾವಣೆಯ ಕಾರಣ ಬೇರೆ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ವಾರವೂ ಇದು ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.

ಯಾವುದೇ ಚಿತ್ರತಂಡ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿಲ್ಲ. ಮೇ.19ಕ್ಕೆ ‘ಡೇರ್ ಡೆವಿಲ್ ಮುಸ್ತಫಾ’ ಸೇರಿದಂತೆ ಕೆಲ ಚಿತ್ರಗಳು ಬಿಡುಗಡೆ ಆಗಲಿವೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!