ಮಲಯಾಳಂ ಚಿತ್ರ ‘ಲೋಕಾ ‘ ಸಿನಿಮಾ ಕರ್ನಾಟಕದಲ್ಲಿ ವಿತರಿಸಿ ದೊಡ್ಡ ಯಶಸ್ಸು ಗಳಿಸಿದ ಲೈಟರ್ ಬುದ್ದ ಫಿಲಂಸ್ ಈ ವಾರ ‘ಇಕೋ’ ಎನ್ನುವ ವರ್ಲ್ಡ್ ಕ್ಲಾಸ್ ಮಲಯಾಳಂ ಸಿನಿಮಾವನ್ನು ವಿತರಣೆ ಮಾಡಿದೆ.
ಒಳ್ಳೆಯ ವಿಮರ್ಶೆ ಗಳಿಸಿರುವ ಇಕೋ ಸಿನಿಮಾ ಲೋಕಾ ರೀತಿ ದೊಡ್ಡ ಯಶಸ್ಸಿನತ್ತ ದಾಪುಗಾಲಿಟ್ಟಿದೆ. ಈ ಸಿನಿಮಾ ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ.
ಲೈಟರ್ ಬುದ್ದ ಫಿಲಂಸ್ ಈ ವರ್ಷ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಸು ಫ್ರಮ್ ಸೋ ನಿರ್ಮಿಸಿ ದಾಖಲೆಯ ಯಶಸ್ಸು ಗಳಿಸಿದ ಬಳಿಕ ಲೋಕಾ ವಿತರಿಸಿ ದೊಡ್ಡ ಯಶಸ್ಸು ಕಂಡಿದೆ. ಈಗ ವರ್ಷಾಂತ್ಯದಲ್ಲಿ ‘ಇಕೋ’ ಚಿತ್ರ ವಿತರಣೆ ಮಾಡುತ್ತಿದೆ.
2025ರಲ್ಲಿ ಮೂರು ಸೂಪರ್ ಹಿಟ್ ಸಿನಿಮಾ ಕೊಟ್ಟ ಶ್ರೇಯಕ್ಕೆ ರಾಜ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪಾತ್ರವಾಗಿದೆ.

__





Be the first to comment