ಯುವರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಎಕ್ಕ’ ರಿಲೀಸ್ ಡೇಟ್ ಬದಲಾಗಿದೆ. ಜೂನ್ 6ರ ಬದಲು ಜುಲೈ 18ಕ್ಕೆ ಚಿತ್ರ ಎಂಟ್ರಿ ಕೊಡಲಿದೆ.
ರೋಹಿತ್ ಪದಕಿ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ‘ಎಕ್ಕ’ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿತ್ತು.
ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ಯುವ ರಾಜ್‌ಕುಮಾರ್ ರಡಗ್ ಲುಕ್‌ನಲ್ಲಿ ನಟಿಸಿದ್ದಾರೆ. ‘ಜಾಕಿ’ ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ‘ಎಕ್ಕ’ ಟೀಸರ್‌ನಲ್ಲಿ ಯುವ ಅಂಥದ್ದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ಎಕ್ಕ ಸಿನಿಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ‘ಉತ್ತರಕಾಂಡ’ ಸಿನಿಮಾ ಆರಂಭಿಸಿದ್ದ ರೋಹಿತ್ ಪದಕಿ ಅದನ್ನು ಪಕ್ಕಕ್ಕಿಟ್ಟು ‘ಎಕ್ಕ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಯುವರಾಜ್ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿದ್ದಾರೆ.
—-

Be the first to comment