ಜೂನ್ 6ಕ್ಕೆ ‘ಎಕ್ಕ’ ಬಿಡುಗಡೆ

ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ‘ಎಕ್ಕ’ ಜೂನ್ 6ಕ್ಕೆ ಬಿಡುಗಡೆಯಾಗಲಿದೆ.

ಈಗಾಗಲೇ ‘ಎಕ್ಕ’ ಚಿತ್ರದ   85ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ 15ರಷ್ಟು ಶೂಟಿಂಗ್ ಗಾಗಿ ಚಿತ್ರತಂಡ ವಾರಾಣಾಸಿಗೆ ಹಾರಿದೆ.   ವಾರಾಣಾಸಿಯಲ್ಲಿ  ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದೆ.

ಏಪ್ರಿಲ್ ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರತಂಡ ನಂತರ ಪ್ರಚಾರದ  ಯೋಜನೆ ಹಾಕಿಕೊಂಡಿದೆ.  ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟುಗೂಡಿ ಚಿತ್ರತಂಡ  ವೇಗವಾಗಿ ಕೆಲಸ ಮಾಡುತ್ತಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ಸಿಕ್ಕಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.

ಎಕ್ಕ  ರೋಹಿತ್ ಪದಕಿ ಸಾರಥ್ಯದಲ್ಲಿ ಚಿತ್ರ ಮೂಡಿ ಬರುತ್ತಿದೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ.

ರೋಹಿತ್ ಪದಕಿ, ವಿಕ್ರಂ ಹತ್ವಾರ್  ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ,  ದೀಪು ಎಸ್ ಕುಮಾರ್ ಸಂಕಲನ ಎಕ್ಕ ಸಿನಿಮಾಗಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!