ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ‘ಎಕ್ಕ’ ಸಿನಿಮಾದ ಸುದ್ದಿಗೋಷ್ಠಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಹಾಗೂ ಸಿನಿಮಾ ತಂಡ ಹಾಜರಿದ್ದರು.
ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ಒಂದು ಸಿನಿಮಾ ಮಾಡಬೇಕಿದ್ದರೆ ಒಂದೊಳ್ಳೆ ವೈಬ್ ಇದ್ದರೆ ಅದು ಚೆನ್ನಾಗಿ ಹೋಗುತ್ತದೆ ಎಂಬ ನಂಬಿಕೆ ಇದೆ. ನಾವು ಬಿಟ್ಟಿರುವ ಪ್ರತಿ ಕಂಟೆಂಟ್ ಎಷ್ಟು ಎಂಜಾಯ್ ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಾ. ನೋಡುವಾಗ ನಿಮಗೂ ಕೂಡ ಅದೇ ಎಮೋಷನ್ ಪಾಸ್ ಆಗುತ್ತದೆ ಎಂದುಕೊಂಡಿದ್ದೇನೆ ಎಂದರು.
ಯುವ ಮಾತನಾಡಿ, ಎಕ್ಕ ಸಿನಿಮಾದ ಕಂಟೆಂಟ್ ಎಲ್ಲರಿಗೂ ಮುಟ್ಟುತ್ತಿದೆ. ಬ್ಯಾಂಗಲ್ ಬಂಗಾರಿ ಹಾಡಿಗೆ ಎಲ್ಲಾ ವರ್ಗದ ಜನ ಇಷ್ಟಪಟ್ಟು ಡ್ಯಾನ್ಸ್ ಮಾಡಿರುವುದನ್ನು ನೋಡಲು ಖುಷಿಯಾಗುತ್ತದೆ. ಖುಷಿಯಿಂದ ಸಿನಿಮಾವನ್ನು ಮಾಡಿದ್ದೇವೆ. ನನ್ನನ್ನು ನೀವು ಹೊಸ ರೀತಿಯಲ್ಲಿ ನೋಡಬಹುದು. ಜುಲೈ 18ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.
ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ಜೂನ್ 6ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಿದ್ದೇವು. ಆದರೆ ಸಿನಿಮಾ ಕೆಲಸ ಬಾಕಿ ಇರುವುದರಿಂದ ಜುಲೈ 18ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರ್ ಗೆ ಬರುತ್ತಾರೆ. ಅತುಲ್ , ಆದಿತ್ಯಾ, ಜಾಲಿ ಜಾಕ್,ಸಾಧುಕೋಕಿಲಾ, ಪುನೀತ್ ರುದ್ರನಾಗ್, ಡಾಕ್ಟರ್ ಸೂರಿ, ಹರಿಣಿ, ಶೃತಿ ಮೇಡಂ, ರಾಹುಲ್ ದೇವಶೆಟ್ಟಿ ತಾರಾಬಳಗ ಚಿತ್ರದಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಎಕ್ಕ ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ಚಿತ್ರ ನಿರ್ಮಾಣ ಮಾಡಲಾಗಿದೆ. ಚರಣ್ ರಾಜ್ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾ ಜುಲೈ 18ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲಿದೆ.





Be the first to comment