ಯುವ ರಾಜ್‌ಕುಮಾರ್ ಅವರ ಎರಡನೇ ಸಿನಿಮಾ ‘ಎಕ್ಕ’ ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ.
ಚಿತ್ರತಂಡ ಆರಂಭದಲ್ಲಿ ಇಬ್ಬರು ನಾಯಕಿಯರು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಘೋಷಿಸಿತ್ತು. ನಟಿ ಸಂಪದಾ ಈಗಾಗಲೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ಸಂಜನಾ ಎಕ್ಕ ಚಿತ್ರತಂಡ ಸೇರಲು ಸಿದ್ಧವಾಗಿದ್ದಾರೆ. ಯುವ ರಾಜಕುಮಾರ್ ಅವರೊಂದಿಗೆ ಮೊದಲ ಬಾರಿಗೆ ಜೋಡಿಯಾಗಲಿದ್ದಾರೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಪಾತ್ರದಿಂದ ಗಮನ ಸೆಳೆದ ಸಂಜನಾ ನಂತರ ದುನಿಯಾ ವಿಜಯ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನದ ಮುಂಬರುವ ರಾಯಲ್ ಚಿತ್ರ ಬಿಡುಗಡೆಗೆ ಸಂಜನಾ ಆನಂದ್ ಎದುರು ನೋಡುತ್ತಿದ್ದಾರೆ. ಸಂಜನಾ ನಟ ವಿರಾಟ್ ಅವರಿಗೆ ಜೋಡಿಯಾಗಿದ್ದು, ಚಿತ್ರ ಜನವರಿ 24 ರಂದು ಬಿಡುಗಡೆಯಾಗಲಿದೆ.
ರೋಹಿತ್ ಪದಕಿ ನಿರ್ದೇಶನದ ಎಕ್ಕ ಚಿತ್ರ ನಿರ್ಮಾಣ ಹಂತದಲ್ಲಿದೆ. ಎಕ್ಕ ಬೆಂಗಳೂರಿನ ಅಪಾಯಕಾರಿ ಭೂಗತ ಜಗತ್ತಿನ ಓರ್ವ ವ್ಯಕ್ತಿಯ ಕಥೆಯಾಗಿದೆ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
‘ಎಕ್ಕ’ ಚಿತ್ರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಬೋಗೇಂದ್ರ), ಮತ್ತು KRG ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ನಿರ್ಮಾಣವಾಗಿದೆ.
Be the first to comment