ದಿ ವಿಲನ್ ನಂತರ ಜೋಗಿ ಪ್ರೇಮ್ ಯಾವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬುದಕ್ಕೆ ‘ಏಕಲವ್ಯ’ ಎಂಬ ಉತ್ತರ ಸಿಕ್ಕಿದೆ. ಪ್ರಚಾರ ವೈಖರಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅವರು ಚಿತ್ರದ ಟೈಟಲ್ ಲಾಂಚ್‍ನ್ನು ಯುಬಿ ಸಿಟಿಯಲ್ಲಿ ಹಮ್ಮಿಕೊಂಡಿದ್ದರು. ಹದಿನಾರನೇ ಮಹಡಿಯಲ್ಲಿ ಸೇರಿದ್ದ ಗಣ್ಯರ ಸಮ್ಮುಖದಲ್ಲಿ ಯೋಗರಾಜಭಟ್ಟರು ಶುಭವಾಗಲಿ ಎಂದಾಗ, ಎದುರಿಗಿದ್ದ ಪ್ರಸ್ಟೀಜ್ ಟವರ್ಸ್ ಕಡೆ ಎಲ್ಲರು ಕತ್ತನ್ನು ಮೇಲಕ್ಕೆ ಹಾಕಿದಾಗ ಡಿಜಿಟಲ್ ಮಾದರಿಯಲ್ಲಿ ಏಕಲವ್ಯ ಶೀರ್ಷಿಕೆ ಕಾಣಿಸಿಕೊಂಡಿತು.
ಗ್ರಾಮೀಣ ಹಿನ್ನಲೆಯಲ್ಲಿ ಬಂದ ಪ್ರೇಮ್ ಮಲಮಹೇದೇಶ್ವರ ಬೆಟ್ಟವನ್ನು ಸಿನಿಮಾಕ್ಕೆ ತಂದರು. ಅವರ ಫಿಲಿಂ ಮೇಕಿಂಗ್ ಮತ್ತು ಮಾರ್ಕೆಟಿಂಗ್ ಎರಡರಲ್ಲೂ ಪ್ರಸಿದ್ದರಾಗಿದ್ದಾರೆ. ಚಿತ್ರವನ್ನು ಮೂಲೆ ಮೂಲೆಗೆ ಹರಡಿದ ಖ್ಯಾತಿ ಇವರದಾಗಿದೆ. ಮೆಮೋರಿ ಚಿಪ್ ಎನ್ನುವುದನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುತ್ತಾರೆ. ಇಂದು ಶುರುವಾಗಿದ್ದು ನಾಯಕ ಸ್ಟಾರ್ ಆಗುವವರೆಗೆ ಸುದ್ದ್ದಿಗಳನ್ನು ಕೊಡುತ್ತಾ ಬರುತ್ತಾರೆ. ಒಳ್ಳೆಯದಾಗಲೆಂದು ಯೋಗರಾಜ್‍ಭಟ್ ಹೇಳಿದರು .ನಿರ್ದೇಶಕನನ್ನು ಹೀರೋ ಅಂತ ಕರೆಯುತ್ತಾರೆ. ಏಕಲವ್ಯ ಕ್ಲಾಸ್ ಅಂತ ಕರೆಯುತ್ತಾರೆ. ಏಕ್ ಲವ್ ಯಾ ಅಂತ ಕರೆದರೆ ಮಾಸ್ ಆಗುತ್ತದೆ. ಬಾಮೈದ ಅಭಿಷೇಕ್ ಹೆಸರನ್ನು ರಾಣಾ ಎಂದು ಬದಲಾವಣೆ ಮಾಡಲಾಗಿದೆ. ಏಳು ಹಾಡುಗಳು ಇರಲಿದೆ. ಮುಂದಿನ ವಾರದಿಂದ ಚಿತ್ರೀಕರಣ ಶುರು. ನಾಯಕಿ ಸದ್ಯದಲ್ಲೆ ಆಯ್ಕೆಯಾಗಲಿದ್ದಾರೆಂದು ಸಿನಿಮಾದ ಮಾಹಿತಿಯನ್ನು ಪ್ರೇಮ್ ಕಾಯ್ದಿರಿಸಿದರು.
ಇಂದು ಅಪ್ಪು ಸಿನಿಮಾದ ಮಹೂರ್ತ ನೆನಪು ಬರುತ್ತದೆ. ಹದಿನೆಂಟು ವರ್ಷದ ಕೆಳಗೆ ಚಿತ್ರರಂಗಕ್ಕೆ ಬಂದು ಮಾದ್ಯಮದವರ ಪ್ರೋತ್ಸಾಹದಿಂದ ಇಲ್ಲಿಯವರೆಗೂ ಬಂದಿರುವೆ. ಸೋದರ ರಾಣಾ ಅವನನ್ನು ಇದೇ ರೀತಿಯಲ್ಲಿ ಬೆಳಸಿ. ನ್ಯೂಯಾರ್ಕ್‍ದಲ್ಲಿ ನಟನೆಗೆ ಬೇಕಾದ ತರಭೇತಿಯನ್ನು ಪಡದುಕೊಂಡಿದ್ದಾನೆ ನಮ್ಮದೆ ಸಂಸ್ಥೆಯಿಂದ ನಿರ್ಮಾಣ ಮಾಡಲಾಗುತ್ತಿದೆ ಅಂತ ರಕ್ಷಿತಾಪ್ರೇಮ್ ಖುಷಿ ವ್ಯಕ್ತಪಡಿಸಿದರು.
ಅಕ್ಕ, ಅಮ್ಮ ಹಾಗೂ ಬಾವನ ಆರ್ಶಿವಾದರಿಂದ ಸಿನಿಮಾರಂಗಕ್ಕೆ ಬರುತ್ತಿದ್ದೇನೆ. ದಿ ವಿಲನ್ ಚಿತ್ರಕ್ಕೆ ಸಹಾಯಕ ನಿರ್ದೇಶನ ಮಾಡಿದ ಅನುಭವವಿದೆ. ಪಾತ್ರಕ್ಕೆ ಶ್ರಮವಹಿಸುತ್ತೇನೆ. ಯಾರಿಗೂ ಬೇಸರ ತರಿಸುವುದಿಲ್ಲ. ಅಕ್ಕ ಪಿಲ್ಲರ್ ತರಹ ಪ್ರಾರಂಭದಿಂದಲೂ ಧೈರ್ಯ ತುಂಬುತ್ತಾ ಬಂದಿದ್ದಾರೆ. ಎಲ್ಲರ ಸಹಕಾರ ಬೇಕೆಂದು ನಾಯಕ ರಾಣಾ ಕೋರಿಕೊಂಡರು.
ಸಂಗೀತ ನಿರ್ದೇಶಕ ಅರ್ಜುನ್‍ಜನ್ಯಾ, ಸಾಹಸ ರವಿವರ್ಮ, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಬಾ.ಮ.ಹರೀಶ್ ಇನ್ನು ಮುಂತಾದ ಉಪಸ್ತಿತಿಯಲ್ಲಿ ರಕ್ಷಿತಾ ಹುಟ್ಟಹಬ್ದ ಆಚರಿಸಿಕೊಂಡರು.
Pingback: special info
Pingback: Buy Sex Toys Online