‘ಏಕ್ ಲವ್ ಯಾ’ 7 ದಿನದಲ್ಲಿ 5 ಮಿಲಿಯನ್ ಸ್ಟ್ರೀಮಿಂಗ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಜೀ5 ಒಟಿಟಿಯಲ್ಲಿ ಭರ್ಜರಿ ಸ್ಟ್ರೀಮಿಂಗ್ ಕಂಡಿದೆ.

 

ಮ್ಯೂಸಿಕಲ್ ಹಿಟ್ ಮೂವೀ ಏಕ್ ಲವ್ ಯಾಗೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಏಪ್ರಿಲ್ 8ರಂದು ಜೀ5ಗೆ ಲಗ್ಗೆ ಇಟ್ಟ ಈ ಸಿನಿಮಾ ಏಳು ದಿನದಲ್ಲಿ 5 ಮಿಲಿಯನ್ ಸ್ಟ್ರೀಮಿಂಗ್ ಕಂಡು ದಾಖಲೆ ಮಾಡಿದೆ.

ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಏಕ್ ಲವ್ ಯಾ ಸಿನಿಮಾ‌‌ ಕಳೆದ ಫೆಬ್ರವರಿ 24ರಂದು ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡಿದ್ದ ಏಕ್ ಲವ್ ಯಾ ಸಿನಿಮಾದಲ್ಲಿ ಕೊಡಗಿನ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ರಾಣಾಗೆ ಜೋಡಿಯಾಗಿ ನಟಿಸಿದ್ದರು. ಪ್ರೀತಿ ಜೊತೆ ಒಳ್ಳೆ ಸಂದೇಶ ನೀಡಿದ್ದ ಈ ಸಿನಿಮಾ ಜೀ5 ಒಟಿಟಿಯಲ್ಲಿ ಕಮಾಲ್ ಮಾಡಿದೆ.

ಚರಣ್ ರಾಜ್, ಶಶಿಕುಮಾರ್, ಸೂರಜ್, ‘ಶಿಷ್ಯ’ ದೀಪಕ್ ಸೇರಿದಂತೆ ದೊಡ್ಡ ತಾರಾ ಬಳಗ ನಟಿಸಿದೆ. ಏಕ್ ಲವ್ ಯಾ ಸಿನಿಮಾವನ್ನು ರಕ್ಷಿತಾ ತಮ್ಮದೇ ರಕ್ಷಿತಾ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಸಿನಿಮಾಕ್ಕಿದೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!