ಎರಡು ಭಾರಿ ಅತ್ಯುತ್ತಮ ಪೋಷಕ ಕಲಾವಿದ ಎಂದು ರಾಷ್ಟ್ರ ಪ್ರಶಸ್ತಿ ಪಡೆದಿರುವ ದತ್ತಣ್ಣ ವೆಂಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಈಗ `ಅಜ್ಜ’ ಆಗಿದ್ದಾರೆ. ದತ್ತಣ್ಣ ವಿಶಿಷ್ಟವಾದ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.
`ತುಳಸಿದಳ’ದಿಂದ `ಅಜ್ಜ’ ವರೆವಿಗೂ 14 ಸಿನಿಮಾಗಳ ನಿರ್ದೇಶನ ಮಾಡಿರುವ ವೆಂಗಲ್ ಅವರು ಮತ್ತೊಂದು ಕುತೂಹಲ ತುಂಬಿರುವ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಾದೇಶ್ವರ ಆರ್ಟ್ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ `ಆನ್ ಟೋಲ್ಡ್ ರಿಯಲ್ ಮಿಸ್ಟರಿ’ ಎಂದು ಉಪ ಶೀರ್ಷಿಕೆ ಇಟ್ಟುಕೊಂಡಿದ್ದಾರೆ.
ಕೆ ಪಿ ಚಿದಾನಂದ್ ಅವರ ನಿರ್ಮಾಣದಲ್ಲಿ ಅಜ್ಜ ಮೂಡಿ ಬಂದಿದೆ. ಅಜ್ಜ ಅಂದರೆ ಭಾಸ್ಕರ ಭಟ್ಟಾಚಾರ್ಯ. ವಿಚಾರವಂತರು, ಟೆಲಿಪತಿ ಸಹ ಗೊತ್ತು, ಚಿತ್ರ ಬಿಡುಸುವುದರಲ್ಲಿ ನಿಸ್ಸೀಮ. ಅವರ ತೀಕ್ಷ್ಣ ವಿಚಾರ ಶೀಲತೆ ಅವರನ್ನು ಜೈಲಿಗೆ ಅಟ್ಟಿ ಬಿಡುತ್ತದೆ. ಅಲ್ಲಿಂದ ವಾಪಸ್ಸು ಬಂದಾಗ ಕಾನ್ಸರ್‍ನಿಂದ ಹೆಂಡತಿ ತೀರಿಹೋಗಿರುತ್ತಾಳೆ. ಅಲ್ಲಿಂದ ವಿಚಿತ್ರ ರೀತಿಯಲ್ಲಿ ಜೀವನ ಸಾಗಿಸುತ್ತಾ ಒಂದು ಬಂಗಲೆಯಲ್ಲಿ ಇರುತ್ತಾರೆ. ಅಲ್ಲಿಗೆ ನಾಲ್ಕು ವೈದ್ಯಕಿಯ ವಿಧ್ಯಾರ್ಥಿಗಳ ತಂಡ ಬರುತ್ತದೆ. ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಉಚಿತ ವೈಧ್ಯಕಿಯ ಸೌಲಭ್ಯ ನೀಡುವ ಈ ತಂಡ ಹೇಗೆ ಸಿಕ್ಕಿಹಾಕಿಕೊಂಡು ಹೋರಾಟ ನಡೆಸುವ ಸಂದರ್ಭ ಬರುವುದು ಚಿತ್ರದ ಕಥಾ ಹಂದರ.
ದತ್ತಣ್ಣ ಅವರ ಜೊತೆ ಬೇಬಿ ಪೃಥ್ವೀಶ್ರೀ, ದೀಪಕ್ ರಾಜ್, ರಾಜ್ ನವೀನ್, ಗಾನವಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಸಾಯಿ ಕಿರಣ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ, ರಾಜು ಶಿರಾಳಕೊಪ್ಪ.
Be the first to comment