ಕನ್ನಡ ಸಾಹಿತ್ಯ ಲೋಕ ಕಂಡ ಮಹಾನ್ ಲೇಖಕ ಟಿ ಪಿ ಕೈಲಾಸಂ ಅವರ ವಿರಚಿತ `ಟೊಳ್ಳು ಗಟ್ಟಿ’ ಕೃತಿ ಆಧಾರಿತ ಚಿತ್ರವನ್ನು ಯುವ ನಿರ್ದೇಶಕ, ನಟ ಮತ್ತು ನಿರ್ಮಾಪಕ ಗುರುದತ್ ಶ್ರೀಕಾಂತ್ ತೆರೆಗೆ ತಂದಿದ್ದಾರೆ. ಕೈಲಾಸಂ ಅವರು 1920 ರಲ್ಲಿ ರಚಿಸಿದ ಈ `ಟೊಳ್ಳು ಗಟ್ಟಿ’ ನಾಟಕ ಈಗ `ಮೂಕ ವಿಸ್ಮಿತ’ವಾಗಿ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ. 1950 ರ ಕಾಲ ಘಟ್ಟಕ್ಕೆ ಸಂಪ್ರದಾಯ ಕುಟುಂಬದ ಹಿನ್ನಲೆಯನ್ನು ತರಲಾಗಿದೆ. ಜೈ ಗುರು ಕ್ರಿಯೇಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.
`ಮೂಕ ವಿಸ್ಮಿತ’ ಶೀರ್ಷಿಕೆಗೆ ಅಡಿಬರಹವಾಗಿ ಟೊಳ್ಳು ನಿರೀಕ್ಷೆ, ಗಟ್ಟಿ ಸಿನಿಮಾ ಎಂದು ಉಲ್ಲೇಖಿಸಲಾಗಿದೆ. 90 ನಿಮಿಷದ ನಾಟಕವನ್ನು ಇಲ್ಲಿ ಎರಡು ಘಂಟೆ ಆವಧಿಯಲ್ಲಿ ಹೇಳಲಾಗಿದೆ. ಗುರುದತ್ ಶ್ರೀಕಾಂತ್ ಈ ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂದೀಪ್ ಮಲಾನಿ ಬ್ರಾಹ್ಮಣ ಕುಟುಂಬದ ಸಿಟ್ಟು, ಅಹಂಕಾರ ಇರುವ ಪಾತ್ರದಲ್ಲಿದ್ದಾರೆ. ಶುಭ ರಕ್ಷ, ವಾಣಿಶ್ರೀ ಭಟ್, ಚಂದ್ರಕೀರ್ತಿ, ಪುಷ್ಪ ರಾಘವೇಂದ್ರ, ಶಿಲ್ಪಾ ಭಾಗವತರ್, ಚಿದಾನಂದ್ ಕುಲಕರ್ಣಿ, ಡಿ ಶ್ರೀಕಾಂತ್, ಸೂರಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ. ಡಾ ಚಿನ್ಮಯ ಎಂ ರಾವ್ ಸಂಗೀತ, ಸಂತೋಷ್ ಆರ್ ಚಾವ್ಲ ಸಂಕಲನ, ಸಿದ್ದು ಬಿ ಎಸ್ ಛಾಯಾಗ್ರಹಣ ಈ ಸಿನಿಮಾಕ್ಕೆ ಒದಗಿಸಿದ್ದಾರೆ.
Pingback: 토토사이트