‘ಇದು ಎಂಥಾ ಲೋಕವಯ್ಯಾ’ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.
ಆಗಸ್ಟ್ 9ಕ್ಕೆ ‘ಇದು ಎಂಥಾ ಲೋಕವಯ್ಯಾ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಿತೇಶ್ ಸಿ ಗೋವಿಂದ್ ನಿರ್ದೇಶಿಸಿದ್ದು, ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ ನಿರ್ಮಾಣ ಮಾಡಿದ್ದಾರೆ.
ಪ್ರಕಾಶ್ ತೂಮಿನಾಡ್, ಅನುರಾಜ್ ಕಕ್ಯಪಡವು, ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಶ್ . ಗೋವಿಂದ್, ದೀಪಕ್ ರೈ ಪಾಣಾಜೆ, ಎಂ.ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಸುಕನ್ಯಾ ವೈ.ಬಿ, ಹರೀಶ್ ಬಂಗೇರ ಇತರರು ನಟಿಸಿದ್ದಾರೆ.
‘ಇದು ಎಂಥಾ ಲೋಕವಯ್ಯಾ’ ಚಿತ್ರಕ್ಕೆ ರಿತ್ವಿಕ್ ಎಸ್. ಚಂದ್ ಹಾಗೂ ಶಿಯಾದ್ ಕಬೀರ್ ಸಂಗೀತ ಸಂಯೋಜನೆ ನೀಡಿದ್ದಾರೆ.
—–
Post Views:
100
Be the first to comment