ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ನಟಿ ರನ್ಯಾ ರಾವ್ ಮನೆ ಮೇಲೆ ಇಡಿ ದಾಳಿ ನಡೆಸಿದೆ.
ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ.
ಇದಕ್ಕೂ ಮುನ್ನ ನಟಿ ರನ್ಯಾ, ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು. ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿತ್ತು.
ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ ಸರ್ಕಾರ ನಿನ್ನೆ ರಾತ್ರಿ ಆದೇಶ ವಾಪಸ್ ಪಡೆದಿದೆ. ಸರ್ಕಾರದ ದಿಢೀರ್ ಯೂಟರ್ನ್ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.14ಕ್ಕೆ ರನ್ಯಾ ರಾವ್ ಬೇಲ್ ನಿರ್ಧಾರ ಆಗಲಿದೆ.
—-

Be the first to comment