ಇಬ್ಬನಿ ತಬ್ಬಿದ ಇಳೆಯಲಿ

OTTಗೆ ಬರಲಿದೆ ‘ಇಬ್ಬನಿ ತಬ್ಬಿದ ಇಳೆಯಲಿ’

ಶೀಘ್ರದಲ್ಲೇ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ OTTಗೆ ಬರಲಿದೆ.

ಮೂಲಗಳ ಪ್ರಕಾರ ಸಿನಿಮಾ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ಆದರೆ ಯಾವಾಗ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎಂಬ ಮಾಹಿತಿ ಇನ್ನೂ ರಿವೀಲ್‌ ಆಗಿಲ್ಲ. ಡೇಟ್‌ ಮಾತ್ರ ಫಿಕ್ಸ್‌ ಆಗಬೇಕಿದೆ. ಸಿನಿಮಾ ಶೀಘ್ರದಲ್ಲೇ  OTTಗೆ ಬರಲಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಮೊದಲಿಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಬರುತ್ತಿದ್ದು, ಬಳಿಕ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿದೆ.

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ವಿಹಾನ್ ಮತ್ತು ಅಂಕಿತಾ ಅಮರ್ ಅವರಿಂದ ವಿಭಿನ್ನವಾಗಿ ರೋಮ್ಯಾಂಟಿಕ್ ಕಥೆ ಹೇಳಿಸೋ ಕೆಲಸವನ್ನು ಡೈರೆಕ್ಟರ್ ಚಂದ್ರಜಿತ್ ಮಾಡಿದ್ದಾರೆ.ಚಿತ್ರಕ್ಕೆ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಾಹಕ, ಗಗನ್ ಬಡೇರಿಯಾ ಸಂಗೀತ ಕೊಟ್ಟಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಸೆಪ್ಟೆಂಬರ್‌ 5ರಂದು ತೆರೆಗೆ ಬಂದಿತ್ತು. ಈ   ಪ್ರೇಮ ಕಾವ್ಯ ಸಿನಿಮಾ ವೀಕ್ಷಕರನ್ನು ಮೋಡಿ ಮಾಡಿತ್ತು. ಚಂದ್ರಜಿತ್ ಬೆಳ್ಳಿಯಪ್ಪ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾಗೆ ನಟ-ಚಲನಚಿತ್ರ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಬ್ಯಾನರ್ ಪರವಃ ಸ್ಟುಡಿಯೋ  ಬೆಂಬಲ ನೀಡಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!