ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು.
ಪ್ರಕೃತಿ ಪ್ರಸನ್ನ, ಸಿರಿ ಮ್ಯೂಸಿಕ್’ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಖ್ಯಾತ ನಟ ಪ್ರಭುದೇವ ಅವರು ಈ ಚಿತ್ರದ ಟ್ರೇಲರ್ ವೀಕ್ಷಿಸಿ ವಿಡಿಯೋ ಮೂಲಕ ಶುಭ ಹಾರೈಕೆ ತಿಳಿಸಿದರು. ಇದೇ ಸಮಯದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಇಮೇಲ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಆನ್ ಲೈನ್ ಗೇಮ್ ನಿಂದಾಗುವ ಪರಿಣಾಮಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಎಸ್ ಆರ್ ರಾಜನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಚಿತ್ರನೋಡಿ ಪ್ರೋತ್ಸಾಹ ನೀಡಿ” ಎಂದರು ರಾಗಿಣಿ ದ್ವಿವೇದಿ.
”ನಾನು ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆದರೆ ನಿರ್ದೇಶನ ಮಾಡಿರುವ ಮೊದಲ ಚಿತ್ರ “ಇಮೇಲ್”. ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ಫೆಬ್ರವರಿ 9 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ರಾಗಿಣಿ, ಅಶೋಕ್ ಸೇರಿದಂತೆ ಇಡೀ ತಂಡಕ್ಕೆ, ಟೀಸರ್ ಬಿಡುಗಡೆ ಮಾಡಿಕೊಟ್ಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಟ್ರೇಲರ್ ನೋಡಿ ಮೆಚ್ಚುಗೆ ಮಾತುಗಳಾಡಿದ ಪ್ರಭುದೇವ ಅವರಿಗೆ ಧನ್ಯವಾದ” ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಎಸ್ ಆರ್ ರಾಜನ್.
ಛಾಯಾಗ್ರಾಹಕ ಸೆಲ್ವಂ ಅವರು ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
“ಇಮೇಲ್” ಮಹಿಳಾ ಪ್ರಧಾನ ಚಿತ್ರ. ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು ಜುಬಿನ್ ಹಾಗೂ “ಐ ಲವ್ ಯು” ಚಿತ್ರದ ಖ್ಯಾತಿಯ ಕಿರಣ್ ತೊಟಂಬೈಲ್ ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ , ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.
—-

Be the first to comment