ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆ

ಸಿನಿಮಾ ತಂತ್ರಜ್ಞಾನರೇ ಸೇರಿ ಮಾಡಿರುವ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಸಿನಿಮಾ  ‘ದ್ವಿಜ’  ಅಕ್ಟೋಬರ್‌ಗೆ ತೆರೆಗೆ ಬರಲು ಸಜ್ಜಾಗಿದೆ.

ರಸ್ತೆ ಅಪಘಾತದಲ್ಲಿ ತಾನು ಪ್ರೀತಿಸುತಿದ್ದ ಹುಡುಗನನ್ನ ಕಳೆದುಕೊಂಡ ಯುವತಿಯೊಬ್ಬಳ ಕಥೆಯನ್ನು  ‘ದ್ವಿಜ’ ಸಿನಿಮಾ ಹೇಳುತ್ತಿದೆ. ಸೈಬರ್ ಕ್ರಿಮಿನಲ್ ಜಗತ್ತಿನ ಅನಾವರಣ ಮಾಡುವ ಪ್ರಯತ್ನ ಇದರಲ್ಲಾಗಿದೆ.  ‘ದ್ವಿಜ’ ಸಿನಿಮಾದ ಟೀಸರ್‌  ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.

‘ದ್ವಿಜ’ ಅನ್ನೋ ಹೆಸರೇ ವಿಶೇಷವಾಗಿದ್ದು. ಇದಕ್ಕೆ ಎರಡನೇ ಹುಟ್ಟು ಎಂಬ ಅರ್ಥದಲ್ಲಿ ‘ದ್ವಿಜ’ ಅನ್ನೋ ಹೆಸರಿಡಲಾಗಿದೆ ಎಂದು ಸಿನಿಮಾದ ನಿರ್ದೇಶಕ ಗಿರಿ ಲಕ್ಷ್ಮಣ್ ಹೇಳಿದ್ದಾರೆ.

ಸಿನಿಮಾದಲ್ಲಿ ಯುವ ನಟರಾದ ಲಡ್ಡು ಗೋಪಾಲ್, ಸೃಷ್ಟಿ ರಾಘವೇಂದ್ರ, ಸತ್ಯ, ದಿಲೀಪ್ ಕುಮಾರ್ ಎಲ್, ಮನೀಶಾ ಭಟ್, ಗಗನ್ ಟಿ ಜಿ ಮುಂತಾದವರು ನಟಿಸಿದ್ದಾರೆ.  ಗೌರಿ ಲಕ್ಷ್ಮಣ್ ಬಂಡವಾಳ ಹೂಡಿದ್ದು, ಶ್ಯಾಮಲ್ ಭೌಮಿಕ್, ರಿಥ್ವಿಕ್ ಶರ್ಮಾ, ಸುಬ್ರಮಣಿಯನ್ ಶೋಭಾ ಮತ್ತು ನವೀನ್ ಎಂ ಬಿ   ಸಹ-ನಿರ್ಮಾಪಕರ ಹೊಣೆ ಹೊತ್ತಿದ್ದಾರೆ.

ಕೀರ್ತನ್ ಭಟ್‌  ಛಾಯಾಗ್ರಹಣ, ಪ್ರಶಾಂತ್ ಅಂಬಿಲಿ  ಸಂಕಲನ, ಶ್ರೀಹರಿ  ಗ್ರಾಫಿಕ್ಸ್ , ಪ್ರಬೋಧ್ ಶ್ಯಾಮ್ ಮತ್ತು ಹೇಮಾದ್ರಿ ಶ್ರೀನಿವಾಸ್  ಸಂಗೀತ ಸಂಯೋಜನೆ ಇದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!