ಒಟಿಟಿಯಲ್ಲಿ ‘ಧುರಂಧರ್’ ದಾಖಲೆ

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದೆ.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಜನವರಿ 30ರಂದು ಒಟಿಟಿಯಲ್ಲಿ ಬಿಡುಗಡೆ ಆಗಿದೆ.   ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಖರೀದಿಗೆ ಹಿಂಜರಿಯುತ್ತಿದ್ದರೂ, ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸು ಮತ್ತು ಪ್ರೇಕ್ಷಕರ ಬೇಡಿಕೆ ಕಾರಣಕ್ಕೆ ಮೊದಲ ಭಾಗದ ಸ್ಟ್ರೀಮಿಂಗ್ ಹಕ್ಕಿಗೆ ನೆಟ್‌ಫ್ಲಿಕ್ಸ್ 85 ಕೋಟಿ ರೂಪಾಯಿ ಪಾವತಿಸಿದೆ ಎಂದು ಹೇಳಲಾಗಿದೆ.  ‘ಧುರಂಧರ್’ ಚಿತ್ರದ ಮೊದಲ ಮತ್ತು ಎರಡನೇ ಭಾಗಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ಆರಂಭದಲ್ಲಿ ನೆಟ್‌ಫ್ಲಿಕ್ಸ್ ಒಟ್ಟಿಗೆ ಖರೀದಿಸಲು ಮುಂದಾಗಿತ್ತು. ಎರಡೂ ಭಾಗಗಳಿಗೆ 170 ಕೋಟಿ ರೂಪಾಯಿ ಡೀಲ್‌ಗೆ ಮಾತುಕತೆ ನಡೆದಿತ್ತು. ಆದರೆ ಆ ಡೀಲ್ ಮಧ್ಯದಲ್ಲಿ ರದ್ದುಗೊಂಡು, ಜಿಯೋ ಹಾಟ್‌ಸ್ಟಾರ್ ಎರಡನೇ ಭಾಗದ ಹಕ್ಕುಗಳನ್ನು 170 ಕೋಟಿ ರೂಪಾಯಿಗೆ ಪಡೆದುಕೊಂಡಿದೆ ಎನ್ನಲಾಗಿದೆ.

ಮೊದಲ ಭಾಗದಲ್ಲಿ ರೆಹಮಾನ್ ಡಕಾಯಿತ್ (ಅಕ್ಷಯ್ ಖನ್ನಾ) ಪಾತ್ರದ ಮರಣದ ನಂತರ ಎರಡನೇ ಭಾಗದಲ್ಲಿ ಹಮ್ಜಾ ಅಲಿ (ರಣವೀರ್ ಸಿಂಗ್) ಪಾತ್ರ  ಕಥೆಯ ಕೇಂದ್ರಬಿಂದು ಆಗಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.  ‘ಧುರಂಧರ್ 2: ದಿ ರಿವೆಂಜ್’ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!