ಆರ್ ಆರ್ ವೆಟ್ರಿ ವೇಲ್ ನಿರ್ದೇಶನದ ‘VK 30’ ಚಿತ್ರದಲ್ಲಿ ನಟ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ.
ಹೊಸ ಸಿನಿಮಾಗಾಗಿ ದುನಿಯಾ ವಿಜಯ್ ಸಲಗ ಚಿತ್ರದ ನಂತರ ಕೆಪಿ ಶ್ರೀಕಾಂತ್ ಜೊತೆಗೆ ಕೈಜೋಡಿಸುತ್ತಿದ್ದು, ಚಿತ್ರಕ್ಕೆ ‘VK 30’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ.
ಸದ್ಯ ವಿಜಯ್ ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ಲ್ಯಾಂಡ್ ಲಾರ್ಡ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ವಿಜಯ್ ರಾಚಯ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಇದು ಮುಗಿದ ನಂತರ ವಿಜಯ್ ಅವರು ವಿಕೆ 30 ಚಿತ್ರೀಕರಣ ಪ್ರಾರಂಭಿಸುತ್ತಾರೆ.
ಈ ಬಾರಿ ದುನಿಯಾ ವಿಜಯ್ ನಟನೆಯ ಮೇಲೆ ಮಾತ್ರ ಗಮನ ಹರಿಸುತ್ತಿದ್ದು, ತಂಬಿಗೆ ನಿರ್ದೇಶನದ ಜವಾಬ್ದಾರಿಯನ್ನು ನೀಡಲಾಗಿದೆ. ದುನಿಯಾ ವಿಜಯ್ ಅವರ ಭೀಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಮಹೇಶ್ ಅವರು ವೆಟ್ರಿ ವೇಲ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ನಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಬೆಂಬಲದೊಂದಿಗೆ ‘ವಿಕೆ 30’ ನಿರ್ಮಾಣವಾಗುತ್ತಿದೆ. ದುನಿಯಾ ವಿಜಯ್ ಹುಟ್ಟುಹಬ್ಬದಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಮತ್ತು ಶಿವಸೇನಾ ಛಾಯಾಗ್ರಹಣವಿದೆ.

Be the first to comment