ವಿಜಯ್ ಈಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹಾಗಂತ ಬೇರೆಯವರಿಗೆ ಅವರು ನಿರ್ದೇಶನ ಮಾಡುತ್ತಿಲ್ಲ.ತಾವೇ ನಾಯಕರಾಗಿ ನಟಿಸುತ್ತಿರುವ “ಸಲಗ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಮುಂದಾಗಿದ್ದಾರೆ. ಈ ಮೂಲಕ ಚಿತ್ರರಂಗದ ಮತ್ತೂಂದು ಮಗ್ಗುಲಿಗೆ ವಿಜಯ್ ತೆರೆದುಕೊಂಡಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಎಲ್ಲವನ್ನು ಪಕ್ಕಾ ಮಾಡಿಕೊಂಡಿರುವ ವಿಜಯ್, ನಿರ್ದೇಶನದ ತಯಾರಿಯಲ್ಲಿ ತೊಡಗಿದ್ದಾರೆ.
ಯೋಗವು ಒಮ್ಮೇ ಬರುವುದು ನೋಡು.. ಎನ್ನುವುದು ನಮ್ಮ ಅಪ್ಪು ಅವರ ಸಿನಿಮಾದ ಜನಪ್ರಿಯ ಗೀತೆಯ ಸಾಲು. ಆದರೆ ನನ್ನ ಪಾಲಿಗೆ ಯೋಗ ಎರಡೆರಡು ಬಾರಿ ಬಂದಿದೆ. ಒಮ್ಮೆ ನಾಯಕನಾಗಿ ಮತ್ತು ಈಗ ನಿರ್ದೇಶಕನಾಗಿ! ಹೌದು ಕೊನೆಗೂ ‘ಸಲಗ’ಕ್ಕೆ ನಾನೇ ಮಾವುತನಾಗುವ ಕಾಲ ಬಂದಿದೆ.
ನಿರ್ಮಾಪಕ ಕೆ.ಪಿ.ಶ್ರೀಕಾಂತ್ “ಸಲಗ’ ನಿರ್ಮಿಸಲು ಮುಂದಾಗಿರುವುದರಿಂದ ವಿಜಯ್, ನಿರ್ದೇಶನದತ್ತ ವಾಲಿದ್ದಾರೆ. “ಸಲಗ’ ಒಂದು ಔಟ್ ಅಂಡ್ ಔಟ್ ಮಾಸ್ ಸಬ್ಜೆಕ್ಟ್ ಆಗಿದ್ದು, ಈ ಮೂಲಕ ವಿಜಯ್ ಮತ್ತೂಮ್ಮೆ ಮಾಸ್ ಹೀರೋ ಆಗಿ ಮಿಂಚಲಿದ್ದಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಈ ಚಿತ್ರದಲ್ಲಿ ವಿಜಯ್ ಗೆಟಪ್ ಕೂಡಾ ಭಿನ್ನವಾಗಿರಲಿದೆಯಂತೆ. ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿರುವ ವಿಜಯ್, ನಿರ್ದೇಶನದ ಜೊತೆಗೆ ಪಾತ್ರ ಪೋಷಣೆಗೂಹೆಚ್ಚಿನ ತಯಾರಿ ನಡೆಸುತ್ತಿದ್ದಾರಂತೆ. ಚಿತ್ರಕ್ಕೆ ನಾಯಕಿ ಇನ್ನಷ್ಟೇ ಆಯ್ಕೆಯಾಗಬೇಕಿದೆ. ಉಳಿದಂತೆ ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಟಗರು’ ಚಿತ್ರಕ್ಕೆ ಸಂಗೀತ ನೀಡಿದ ಚರಣ್‌ರಾಜ್ ಅವರ ಸಂಗೀತ ಚಿತ್ರಕ್ಕಿದೆ. ಜೂನ್‌ನಿಂದ “ಸಲಗ’ ಚಿತ್ರೀಕರಣಕ್ಕೆ ಹೊರಡಲಿದೆ.
Pingback: dana bos 2022