ಭೀಮಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ದುನಿಯಾ ವಿಜಯ್ ಹೊಸ ಸಿನಿಮಾ ಘೋಷಿಸಿದ್ದಾರೆ.
ತಮ್ಮ ಬಹು ಕಾಲದ ಸ್ನೇಹಿತ ಆರ್‌ಆರ್ ವೆಟ್ರಿ ವೇಲ್(ತಂಬಿ) ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾಗೆ ‘VK 30’ ಎಂದರೆ ವಿಜಯ್ ಅವರ 30ನೇ ಸಿನಿಮಾ ಎಂಬ ಶೀರ್ಷಿಕೆ ಇಡಲಾಗಿದೆ.
ಆರ್‌ಆರ್ (ತಂಬಿ) ನಿರ್ದೇಶನದ ಚಿತ್ರಕ್ಕೆ ಕಥೆಯೂ ಅವರದ್ದೇ ಆಗಿದೆ. ಚಿತ್ರದ ಪೋಸ್ಟರ್ ಭಿನ್ನವಾಗಿದ್ದು ಹೊಸ ಲುಕ್‌ನಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಕಾಡಿನಲ್ಲಿ ನಡೆಯುವ ಕಥೆಯಂತಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಆರ್‌ಆರ್ (ತಂಬಿ) ಅವರಿಗಿದೆ.
”ವೆಟ್ರಿ ಅತ್ಯಂತ ಪ್ರತಿಭಾವಂತ. ನನ್ನೊಂದಿಗೆ ಕೆಲಸ ಮಾಡುವ ತಂತ್ರಜ್ಞರು ಬೆಳೆಯುವುದನ್ನು ನೋಡಲು ನಾನು ಯಾವಾಗಲೂ ಬಯಸುತ್ತೇನೆ. ನಾನು ಅವರನ್ನು ಪೋಷಿಸುವ ಗುರಿಯನ್ನು ಹೊಂದಿದ್ದೇನೆ. ಕಳೆದ ಎರಡು ವರ್ಷಗಳಿಂದ ವೆಟ್ರಿ ನನ್ನೊಂದಿಗೆ ಇದ್ದಾರೆ. ನನ್ನ ನಟನೆಯ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಾವು ಸಮಾನ ಮನಸ್ಕರಾಗಿದ್ದೇವೆ. ನಾನು ಸಹಾಯಕ ನಿರ್ದೇಶಕರನ್ನು ಯಾವುದೇ ಸಿನಿಮಾದ ಆಧಾರ ಸ್ತಂಭಗಳಲ್ಲಿ ಒಬ್ಬರು ಎಂದು ಪರಿಗಣಿಸುತ್ತೇನೆ” ಎಂದಿದ್ದಾರೆ ವಿಜಯ್.
ಚಿತ್ರದ ಕಥೆಯನ್ನು ಗೌಪ್ಯವಾಗಿಟ್ಟಿರುವ ದುನಿಯಾ ವಿಜಯ್ , ಇದು ಮತ್ತೊಂದು ಗ್ಯಾಂಗ್ ಸ್ಟರ್ ಚಿತ್ರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಸದ್ಯ ವಿಜಯ್ ‘ಕಾಟೇರ’ ಕಥೆಗಾರ ಜಡೇಶ್ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ವಿಜಯ್ ನಟನೆಯ 29ನೇ ಸಿನಿಮಾವಾಗಿದೆ.
ಮುಂದಿನ ನಿರ್ದೇಶನದ ಬಗ್ಗೆ ಮಾತನಾಡಿರುವ ವಿಜಯ್, ” ನಿರ್ದೇಶಕರ ಕುರ್ಚಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
Be the first to comment