ನಿಖಿಲ್ ಕುಮಾರ್ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್?

ನಿಖಿಲ್ ಕುಮಾರ್ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಲೈಕಾ ಪ್ರೊಡಕ್ಷನ್ ಹೌಸ್, ಮೊದಲ ಬಾರಿಗೆ ಕನ್ನಡ ಸಿನಿಮಾಗೆ ಹಣ ಹೂಡುತ್ತಿದ್ದು, ಹೊಸ ಚಿತ್ರಕ್ಕೆ ನಿಖಿಲ್ ಕುಮಾರ್ ಸ್ವಾಮಿ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ಯುಕ್ತಿ ಥರೇಜಾ (ರಂಗಬಲಿ) ಮತ್ತು ಕೋಮಲ್ ಕುಮಾರ್ ನಟಿಸಲಿದ್ದಾರೆ. ಪ್ರಮುಖ ಪಾತ್ರಕ್ಕಾಗಿ ನಟ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಈ ದ್ವಿಭಾಷಾ ಚಿತ್ರದಲ್ಲಿ ವಿಜಯ್ ಕುಮಾರ್ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ದುನಿಯಾ ವಿಜಯ್ ಪಾತ್ರವೇನು ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಬಹಿರಂಗಪಡಿಸುವ ನಿರೀಕ್ಷೆ ಇದೆ.

ನಿರ್ದೇಶಕ ಲಕ್ಷ್ಮಣ್ ಅವರ ಕನ್ನಡದ ಮೊದಲ ಚಿತ್ರ ಇದಾಗಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ, ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ವಂಶಿ ಪಚ್ಚಿಪುಲುಸು ಛಾಯಾಗ್ರಹಣ ಮಾಡಲಿದ್ದಾರೆ.

ವಿಜಯ್ ಕುಮಾರ್ ಅವರು ತಮ್ಮ ಎರಡನೇ ನಿರ್ದೇಶನದ ಭೀಮಾ ಸಿನಿಮಾದಲ್ಲಿ ನಿರತ ಆಗಿದ್ದಾರೆ. ಚಿತ್ರ ನವೆಂಬರ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!