“ಡ್ಯೂಡ್” ಚಿತ್ರದ ಅದ್ದೂರಿ ಮೂಹೂರ್ತ ; ಇದು 12ಜನ ನಾಯಕಿಯರ ಚಿತ್ರ!

ಸ್ಯಾಂಡಲ್ ವುಡ್ ನಲ್ಲಿ  ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಕ್ರೀಡೆಗೆ ಸಂಬಂಧಪಟ್ಟಂತ ಸಿನಿಮಾಗಳು ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಆ ನಿಟ್ಟಿನಲ್ಲಿ ಈ ಬಾರಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಹಿಳೆಯರೇ ಕ್ರೀಡಾಪಟುವಾಗಿ ಅಭಿನಯಿಸಲಿರುವ “ಡ್ಯೂಡ್” ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು.

ಈ ಸಿನಿಮಾದ ಮುಹೂರ್ತ  ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್ ಆಗಮಿಸಿ ಚಿತ್ರಕ್ಕೆ ಚಾಲನೆಯನ್ನು ನೀಡಿದರು.ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ.

ನಿರ್ದೇಶಕ ತೇಜ್ ಮಾತನಾಡಿ ನಾನು ಈ ಚಿತ್ರವನ್ನು ಶಂಕರ್ ನಾಗ್ ಸರ್ ಗೆ ಅರ್ಪಿಸಿದ್ದೇನೆ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿ ಆನಂತರ ಕನ್ನಡ , ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡೆ .ಇದಾದ ನಂತರ ರಿವೈಂಡ್ ಎನ್ನುವ ಸಿನಿಮಾವನ್ನು ನಿರ್ದೇಶಿಸಿ ನಾನೇ ನಟಿಸಿದೆ , ತದನಂತರ ರಾಮಾಚಾರಿ 2.0 ಎಂಬ ಸಿನಿಮಾ ಮಾಡಿದ್ದೆ. ಈಗ ಸ್ಪೋರ್ಟ್ಸ್ ಗೆ ಸಂಬಂಧಪಟ್ಟಂತ ಮಹಿಳೆಯರೇ ಫುಟ್ಬಾಲ್  ಆಟಗಾತಿಯರಾಗಿ ಅಭಿನಯಿಸಲಿರುವ “ಡ್ಯೂಡ್” ಎನ್ನುವ ಹೊಸ ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತಿದ್ದೇನೆ.  ಈ ಚಿತ್ರದಲ್ಲಿ ಒಬ್ಬ ನೊಂದ ಪ್ರೇಮಿಯಾಗಿ ಕೂಡ ನಾನು ಅಭಿನಯಿಸುತ್ತಿದ್ದೇನೆ. ಈ ಚಿತ್ರದಲ್ಲಿ ಹಲವಾರು ಪ್ರಮುಖರು ನಟಿಸುತ್ತಿದ್ದು, ವಿಶೇಷವಾಗಿ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಅಪ್ಪ ಮಗಳ ಬಾಂಧವ್ಯದ ಟ್ರ್ಯಾಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ರಂಗಾಯಣ ರಘು ಈ ಫುಟ್ಬಾಲ್ ಟೀಮ್ ಕೋಚ್ ಆಗಿ ನಟಿಸುತ್ತಿದ್ದಾರೆ. ವಿಶೇಷವಾಗಿ ಸ್ಪರ್ಶ ರೇಖಾ , ವಿಜಯ ಚಂಡೂರ್, ಸಂದೀಪ್ ಮಲಾನಿ, ಪ್ರವೀಣ್ ನಾಯಕ್ ಸೇರಿದಂತೆ  12 ಯುವತಿಯರು ನಟಿಸುತ್ತಿದ್ದಾರೆ.

ನಿರ್ದೇಶಕ ತೇಜುಗೆ ಬೆನ್ನೆಲುಬಾಗಿ ಶಶಿಧರ್ ಕೆ. ಎಂ. ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಛಾಯಾಗ್ರಹಣವನ್ನು ಪ್ರೇಮ್ ನಿರ್ವಹಿಸಲಿದ್ದು,  ಜಿಂಕೆಮರಿ ನಾ.. ಹಾಡಿಗೆ ಸಂಗೀತ ನೀಡಿದ ಎಮಿಲ್ ಮೊಹಮ್ಮದ್  ರಾಗ ಸಂಯೋಜನೆ ಮಾಡುತ್ತಿದ್ದಾರೆ. ಮಂಜು ದೊಡ್ಮನಿ ಅವರ ಸಾಹಿತ್ಯವಿದ್ದು  , ಈ ಸಿನಿಮಾದ ಹಾಡುಗಳಿಗೆ ರಾಜಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ತೇಜ್ ನಿರ್ದೇಶಿಸುತ್ತಿರುವ ಈ ಸಿನಿಮಾದ  ಪ್ರತಿಯೊಬ್ಬರ ಪಾತ್ರದಾರಿಗಳ ಬದುಕು ಒಂದೊಂದು ಒಂದೊಂದು ರೀತಿ ವಿಭಿನ್ನವಾಗಿದ್ದು , ಬದುಕಿನ ಗೆಲುವಿಗಾಗಿ ಅವರು ಪಡುವ ಶ್ರಮ ಸುತ್ತಾ ಕಥೆ ಹೇಳಲಾಗಿದೆ. ವಿಶೇಷತೆ ಅಂದ್ರೆ  ಬರೋಬ್ಬರಿ ಈ  ಸಿನಿಮಾದಲ್ಲಿ   ಸಾನಿಯಾ ಕಾವೇರಮ್ಮ , ಪೂಜರಾಜು, ಚಿತ್ರಲ್ ರಂಗಸ್ವಾಮಿ , ರೋಹಿಣಿ, ಪ್ರಣವಿ ಗೌಡ, ಸಹನಗೌಡ, ಜೀವತಾ, ದೃತಿ, ಸೌಮ್ಯ , ರೊಸ್ಲಿಂಗ್, ಮಿಶೇಲ್ ನೊರೋನ, ತನುಜ ತೀತಿರ ಹೀಗೆ 12 ಬ್ಯೂಟಿಫುಲ್ ನಾಯಕಿಯರು ಅಭಿನಯಿಸುತ್ತಿದ್ದಾರೆ.

ಈ ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ  ನಿರ್ಮಾಣವಾಗಲಿದ್ದು , ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದೆಯಂತೆ . ಅಪ್ಪು ಸಾಕರ್ ಫುಟ್ಪಾಲ್ ಪಂದ್ಯಾವಳಿಯ ಅಡಿಯಲ್ಲಿ  ಈ ಚಿತ್ರದ ಚಿತ್ರಕಥೆಯ ಮಾಡಿಕೊಳ್ಳಲಾಗಿದ್ದು , ಸದ್ಯ ಚಿತ್ರೀಕರಣದ ತಯಾರಿ ನಡೆಸುತ್ತಿದ್ದು , ನವಂಬರ್ ನಿಂದ ಚಿತ್ರೀಕರಣಕ್ಕೆ ಹೊರಡಲು ಯೋಜನೆ ಹಾಕಿಕೊಂಡಿದ್ದು  , ಇನ್ನಷ್ಟು ವಿಚಾರಗಳನ್ನ ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!