KD ಕೆಡಿ ಚಿತ್ರಕ್ಕೆ ತೂಕ ಇಳಿಸಿದ ಧ್ರುವ ಸರ್ಜಾ

ಧ್ರುವ ಸರ್ಜಾ ಮಾರ್ಟಿನ್‌ ಚಿತ್ರಕ್ಕಾಗಿ ಸದೃಢವಾಗಿ ಬೆಳೆಸಿದ್ದ ದೇಹವನ್ನು ಕೆಡಿ ಚಿತ್ರಕ್ಕಾಗಿ ಇಳಿಸಿಕೊಂಡಿದ್ದಾರೆ.

ಧ್ರುವ ಸರ್ಜಾ 30 ದಿನಗಳ ಅಂತರದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ.

‘ಏಕ್‌ ಲವ್‌ ಯಾ’ ಸಿನಿಮಾ ಬಳಿಕ ಧ್ರುವ ಸರ್ಜಾ ಜೊತೆಗೆ ಹೊಸ ಪ್ರೊಜೆಕ್ಟ್‌ ನ್ನು 2022ರ ಏಪ್ರಿಲ್‌ನಲ್ಲಿ ‘ಜೋಗಿ’ ಪ್ರೇಮ್‌ ಕೈಗೆತ್ತಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ಚಿತ್ರದ ಶೀರ್ಷಿಕೆ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಎ.ಪಿ.ಅರ್ಜುನ್‌ ನಿರ್ದೇಶನದ ‘ಮಾರ್ಟಿನ್‌’ ಚಿತ್ರದಲ್ಲಿ ಧ್ರುವ ತೊಡಗಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ಹೆವಿ ವರ್ಕ್‌ಔಟ್‌ ಕೂಡಾ ಮಾಡಿದ್ದರು.

ಅದ್ಧೂರಿಯಾಗಿ ನಿರ್ಮಾಣವಾಗಲಿರುವ ‘KD'(ಕಾಳಿದಾಸ) ಚಿತ್ರ ಸೆಟ್ಟೇರಿದ್ದು, ಚಿತ್ರದ ಪಾತ್ರಕ್ಕಾಗಿ ಧ್ರುವ ಸರ್ಜಾ ತೂಕ ಇಳಿಸಿಕೊಂಡಿದ್ದಾರೆ.

‘KD’ ಸಿನಿಮಾ 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ ಎಂದು ಪ್ರೇಮ್‌ ಹೇಳಿದ್ದಾರೆ.

ಈ ಚಿತ್ರದಲ್ಲಿ ಧ್ರುವ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದಾರೆ. ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಇದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!