ಹರೀಶ್ ರಾಯ್ ನೆರವಿಗೆ ಬಂದ ಧ್ರುವ ಸರ್ಜಾ

ನಟ ಹರೀಶ್ ರಾಯ್ ನೆರವಿಗೆ ನಟ ಧ್ರುವ ಸರ್ಜಾ ಬಂದಿದ್ದಾರೆ. ಹರೀಶ್ ರಾಯ್ ಅವರ ಆಸ್ಪತ್ರೆ ಖರ್ಚು ಭರಿಸುತ್ತೇನೆ ಎಂದು ಧ್ರುವ ಮಾತು ಕೊಟ್ಟಿದ್ದಾರೆ.

ಹರೀಶ್ ರಾಯ್ ತಮಗೆ ಸಹಾಯ ಹಸ್ತಚಾಚಿದ  ಧ್ರುವ ಸರ್ಜಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಆದರೆ ಈ ವಿಷಯವನ್ನ ಯಾರಿಗೂ ಹೇಳ್ಬೇಡಿ ಅಂತಲೇ ಧ್ರುವ ಸರ್ಜಾ ಹೇಳಿದ್ದರು. ಆದರೂ ಒಂದು ಒಳ್ಳೆಯ ಕೆಲಸ  ಎಲ್ಲರಿಗೂ ತಿಳಿಯಲಿ. ಅದನ್ನ ಯಾಕೆ ಗುಟ್ಟು ಮಾಡಿ ಇಟ್ಟುಕೊಳ್ಳುವುದು ಅಂತಲೇ ಹರೀಶ್ ರಾಯ್ ವಿಡಿಯೊ ಮಾಡಿದ್ದಾರೆ.

ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಹೊಟ್ಟೆಗೆ ಹರಡಿ ಈಗ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ.  ಸಿನಿಮಾಗಳಿಲ್ಲದೇ ಹರೀಶ್ ರಾಯ್ ಗೆ  ಮನೆಯ ಜವಾಬ್ದಾರಿ ನಿಭಾಯಿಸಲಾಗುತ್ತಿಲ್ಲ. ಮತ್ತೊಂದೆಡೆ ದುಬಾರಿ ಚಿಕಿತ್ಸೆಗಾಗಿ ವೈದ್ಯರು ಸಲಹೆ ನೀಡಿದ್ದಾರೆ. ಮುಂದಿನ ಹಂತದ ಚಿಕಿತ್ಸೆಗಾಗಿ ಹರೀಶ್ ರಾಯ್‌ಗೆ 70-80 ಲಕ್ಷ ರೂಪಾಯಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಕಾಣಿಸಿಕೊಂಡ ಕ್ಯಾನ್ಸರ್  ಹರೀಶ್ ರಾಯ್  ಬದುಕಿಗೆ ಕುತ್ತು ತಂದಿದೆ.    ಮೂರು ವರ್ಷಗಳ ಹಿಂದೆ ಕೆಜಿಎಫ್ ಸಿನಿಮಾ ಶೂಟಿಂಗ್ ವೇಳೆ ಕ್ಯಾನ್ಸರ್ ಚಿಕಿತ್ಸೆಗಾಗಿ ಯಶ್, ದರ್ಶನ್ ಹಾಗೂ ದುನಿಯಾ ವಿಜಯ್ ಸಹಾಯ ಮಾಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!