ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರು ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ವಿರುದ್ಧ ನಡೆದ ರೇಪ್ ಆಂಡ್ ಮರ್ಡರ್ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಹ್ಯಾಂಡಲ್ನಲ್ಲಿ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ ಅತ್ಯಾಚಾರಗಳ ವಿರುದ್ಧ ಗರಂ ಆಗಿ ಮಾತಾಡಿದ್ದಾರೆ.
‘ರಾಮ ಹುಟ್ಟಿದ ನಾಡಲಿ ಕೆಲ ದುಷ್ಕರ್ಮಿಗಳು ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು ಬರ್ತಿದೆ. ಹೆಣ್ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಇದೇ ರೀತಿ ಬಟ್ಟೆ ಹಾಕಬೇಕು ಅಂತಾರೆ. ಹೆಣ್ಣು ಮಕ್ಕಳಿಗೆ ಈ ರೀತಿ ಹೇಳುವುದಕ್ಕು ಮುನ್ನ ಒಬ್ಬ ಹುಡುಗನನ್ನು ಪೋಷಕರು ಬೆಳೆಸುವಾಗ ಮೂರು ವಿಷಯಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು. ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಗೌರವಿಸಬೇಕು, ಹೇಗೆ ಬೆಂಬಲಿಸಬೇಕು ಎಂಬುದನ್ನು ಹೇಳಿಕೊಡಲೇಬೇಕು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಇಂಥ ರೇಪಿಸ್ಟ್ಗಳು ಸಿಕ್ಕಿ ಬೀಳಬೇಕು, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಅಂತ ಎಂದು ನಾನು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ. ರೇಪಿಸ್ಟ್ ಗಳಿಗೆ ಎಂಥಾ ಶಿಕ್ಷೆ ಕೊಟ್ಟರೂ ಸಮಾಧಾನ ಆಗಲ್ಲ. ಇಂಥವರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸುಟ್ಟುಹಾಕಿದರೂ ಸಮಾಧಾನ ಆಗಲ್ಲ. ಆ ಭಗವಂತ ಇಂಥವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
‘ನನಗೂ ಹೆಣ್ಣು ಮಗಳು ಇದ್ದಾಳೆ. ಯಾರಿಗೋ ಅನ್ಯಾಯ ಆಗಿದೆ ಎಂದಾಗ ಅವರ ಜೊತೆ ನಾವು ಇರಬೇಕು. ದಯವಿಟ್ಟು ಎಲ್ಲರು ಈ ಬಗ್ಗೆ ಧ್ವನಿಯೆತ್ತಿ ಮಾತಾಡಬೇಕು. ಎಲ್ಲರೂ ನ್ಯಾಯ ಕೇಳೋಣ. ಭಾರತವನ್ನು ಬದಲಾಯಿಸಬೇಕಿದೆ. ಈ ವಿಚಾರಕ್ಕೆ ನಾವೆಲ್ಲರೂ ಒಂದಾಗಬೇಕು’ ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಹೇಳಿದ್ದಾರೆ.
__
Be the first to comment