ರಾಜ್‌ಗುರು ನಿರ್ದೇಶನದ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ನಟಿ ರಚಿತಾ ರಾಮ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
‘ಕೆಡಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಧ್ರುವ ಸರ್ಜಾ ಹೊಸ ಚಿತ್ರದಲ್ಲಿ ‘ಕೆರೆಬೇಟೆ’ ಖ್ಯಾತಿಯ ನಿರ್ದೇಶಕ ರಾಜ್‌ಗುರು ಬಿ ಅವರೊಂದಿಗೆ ಕಂಟೆಂಟ್ ಆಧರಿತ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಮೂಲಗಳ ಪ್ರಕಾರ, ಕಥೆಯು ಗ್ರಾಮೀಣ ಹಿನ್ನೆಲೆಯಲ್ಲಿ ನಾಟಕ ಮತ್ತು ಆ್ಯಕ್ಷನ್ ಮಿಶ್ರಣ ಹೊಂದಿದೆ. ಚಿತ್ರಕ್ಕೆ ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ಅವರು ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ತಾಂತ್ರಿಕ ತಂಡ ಮತ್ತು ಉಳಿದ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದರೂ, ಈ ವರ್ಷ ಯೋಜನೆಯು ಸೆಟ್ಟೇರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ಪೂರ್ಣಗೊಳಿಸಲು ಯೋಜಿಸುತ್ತಿದೆ.
ಭರ್ಜರಿ (2017) ಬಿಡುಗಡೆಯಾದ 8 ವರ್ಷಗಳ ನಂತರ ಧ್ರುವ ಮತ್ತು ರಚಿತಾ ಬೆಳ್ಳಿತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲವಾದರೂ, ಪ್ರೀ-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರುವ ನಿರೀಕ್ಷೆಯಿದೆ.
ಚೇತನ್ ಕುಮಾರ್ ನಿರ್ದೇಶನದ ಭರ್ಜರಿ ಚಿತ್ರದಲ್ಲಿ ಧ್ರುವ ಮತ್ತು ರಚಿತಾ ಇಬ್ಬರ ಕೆಮಿಸ್ಟ್ರಿ ವರ್ಕ್ ಆಗಿತ್ತು. ಈ ಜೋಡಿ ಅದೇ ಕೆಮಿಸ್ಟ್ರಿಯನ್ನು ತೆರೆಮೇಲೆ ಮರುಸೃಷ್ಟಿಸುತ್ತದೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
—–





Be the first to comment