ದೃಶ್ಯ2 ಟ್ರೈಲರ್ ರಿಲೀಸ್

ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿರುವ ‘ದೃಶ್ಯ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಈ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದ್ದು, ನಟ ಸುದೀಪ್ ಅವರು ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. 2014 ರ ‘ದೃಶ್ಯ’ ಸಿನಿಮಾದಲ್ಲಿ ರವಿ ಬೋಪಣ್ಣ ಮುಚ್ಚಿ ಹಾಕಿದ್ದ ಕೊಲೆಯ ರಹಸ್ಯ ಈ ಸಿನಿಮಾದಲ್ಲಿ ತೆರೆದುಕೊಳ್ಳಲಿದೆ ಎನ್ನುವ ಮಾಹಿತಿ ಟ್ರೈಲರ್ ನಲ್ಲಿ ಇದೆ.

2014 ರಲ್ಲಿ ಬಿಡುಗಡೆ ಆಗಿದ್ದ ‘ದೃಶ್ಯ’ ಸಿನಿಮಾದ ಮುಂದುವರೆದ ಭಾಗ ಈ ಸಿನಿಮಾ ಆಗಿದೆ. ಅಂದು ಸಿನಿಮಾದಲ್ಲಿ ನಟಿಸಿದ್ದ ಕಲಾವಿದರೇ ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸಿನಿಮಾದಲ್ಲಿ ಕೆಲವು ಹೊಸ ಪಾತ್ರಗಳೂ ಸೇರ್ಪಡೆ ಆಗಿವೆ.

ಈ ಹಿಂದೆ ‘ದೃಶ್ಯ’ ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ಅವರೇ ‘ದೃಶ್ಯ 2’ ನ್ನು ನಿರ್ದೇಶನ ಮಾಡಿದ್ದಾರೆ. 2014ರಲ್ಲಿ ಬಿಡುಗಡೆ ಆದ ಈ ಸಿನಿಮಾ ಮೋಹನ್‌ಲಾಲ್‌ ಅವರ ‘ದೃಶ್ಯಂ’ ಸಿನಿಮಾದ ರೀಮೇಕ್ ಆಗಿತ್ತು. ಮಲಯಾಳಂ ಸಿನಿಮಾ ‘ದೃಶ್ಯಂ 2’ ರ ರೀಮೇಕ್ ‘ದೃಶ್ಯ 2’ ಆಗಿದೆ.

ಮಲಯಾಳಂನ ಮೂಲ ‘ದೃಶ್ಯಂ 2’ ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಿತ್ತು. ಬಳಿಕ ತಯಾರಾದ ವೆಂಕಟೇಶ್ ನಟಿಸಿದ ತೆಲುಗಿನ ರೀಮೇಕ್‌ ‘ದೃಶ್ಯ 2’ ಸಿನಿಮಾ ಒಟಿಟಿಯಲ್ಲಿಯೇ ಬಿಡುಗಡೆ ಆಗಿತ್ತು. ಆದರೆ ರವಿಚಂದ್ರನ್ ನಟನೆಯ ‘ದೃಶ್ಯ 2’ ಒಟಿಟಿಗೆ ಬದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

‘ದೃಶ್ಯ 2’ ಚಿತ್ರದಲ್ಲಿ ರವಿಚಂದ್ರನ್, ನವ್ಯಾ ನಾಯರ್, ಮಕ್ಕಳ ಪಾತ್ರದಲ್ಲಿ ಸ್ವರೂಪಿಣಿ ನಾರಾಯಣ್, ಉನ್ನತಿ, ಸಾಧು ಕೋಕಿಲ, ಶ್ರೀನಿವಾಸ ಪ್ರಭು, ಆಶಾ ಶರತ್, ಪ್ರಮೋದ್ ಶೆಟ್ಟಿ, ಅನಂತನಾಗ್ ನಟಿಸಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!